Select Your Language

Notifications

webdunia
webdunia
webdunia
webdunia

ಬಿಬಿಕೆ10: ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ, ತನಿಷಾಗೆ ಐ ಲವ್ ಯೂ ಎಂದ ವರ್ತೂರು

ಬಿಬಿಕೆ10: ಶಾಲೆಯಾಗಿ ಬದಲಾದ ಬಿಗ್ ಬಾಸ್ ಮನೆ, ತನಿಷಾಗೆ ಐ ಲವ್ ಯೂ ಎಂದ ವರ್ತೂರು
ಬೆಂಗಳೂರು , ಮಂಗಳವಾರ, 12 ಡಿಸೆಂಬರ್ 2023 (10:40 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಮನೆ ಈಗ ಶಾಲೆಯಾಗಿ ಪರಿವರ್ತನೆಯಾಗಿದೆ. ಹೀಗಾಗಿ ಈ ವಾರದ ಟಾಸ್ಕ್ ಸಖತ್ ಫನ್ನಿಯಾಗಿದೆ.

ಕಳೆದ ವಾರ ರಾಕ್ಷಸರು ಮತ್ತು ಗಂಧರ್ವರು ಎಂಬ ಆಕ್ರಮಣಕಾರೀ ಟಾಸ್ಕ್ ನೀಡಿದ್ದ ಬಿಗ್ ಬಾಸ್ ಈ ವಾರ ಶಾಲೆಯ ಟಾಸ್ಕ್ ನೀಡಿದ್ದು, ಸ್ಪರ್ದಿಗಳೆಲ್ಲರೂ ಮಕ್ಕಳಾಗಿ ಫನ್ ಮಾಡಲಿದ್ದಾರೆ.

ಕಳೆದ ವಾರ ಟಾಸ್ಕ್ ನಲ್ಲಿ ಸಾಕಷ್ಟು ಹಿಂಸಾತ್ಮಕ ಅಂಶಗಳಿದ್ದುದರಿಂದ ವೀಕ್ಷಕರಿಂದಲೂ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಸಂಗೀತಾ ಮತ್ತು ಡ್ರೋಣ್ ಪ್ರತಾಪ್ ಗೆ ಕಣ್ಣಿಗೆ ಏಟಾಗಿತ್ತು. ಇದೆಲ್ಲಾ ಆತಂಕಕ್ಕೆ ಕಾರಣವಾಗಿತ್ತು.

ಈ ವಾರ ಶಾಲೆ ಟಾಸ್ಕ್ ನಡೆಯುತ್ತಿದೆ. ತನಿಷಾ ಕುಪ್ಪಂಡ ಟೀಚರ್ ಆಗಿದ್ದರೆ, ಉಳಿದವರು ವಿದ್ಯಾರ್ಥಿಗಳಾಗಿ ತಮಾಷೆ ಮಾಡಿ ನಗಿಸಲಿದ್ದಾರೆ. ಈ ನಡುವೆ ವಿದ್ಯಾರ್ಥಿ ಪಾತ್ರದಲ್ಲಿರುವ ವರ್ತೂರು ಸಂತೋಷ್ ಸ್ಲೇಟ್ ನಲ್ಲಿ ಟೀಚರ್ ತನಿಷಾಗೆ ಐ ಲವ್ ಯೂ ಎಂದು ಬರೆದು ಕೊಟ್ಟು ಮುಖ ರಂಗೇರುವಂತೆ ಮಾಡಿದ್ದಾರೆ. ಪ್ರತೀ ಬಾರಿ ಬಿಗ್ ಬಾಸ್ ಶೋನಲ್ಲಿ ಶಾಲೆ ಟಾಸ್ಕ್ ಅತ್ಯಂತ ಮನರಂಜನೆ ಕೊಟ್ಟಿತ್ತು. ಈ ಬಾರಿಯೂ ಹೆಚ್ಚು ಮನರಂಜನೆ ಸಿಗಬಹುದು ಎಂಬ ನಿರೀಕ್ಷೆ ಪ್ರೇಕ್ಷಕರಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ನಲ್ಲಿ ಸನ್ನಿಲಿಯೋನ್ ಜೀವನಚರಿತ್ರೆಯ ಸಿನೆಮಾ