Select Your Language

Notifications

webdunia
webdunia
webdunia
webdunia

ರಾಕಿ ಭಾಯ್ ಬರ್ತ್‌ಡೇಗೆ ವಿಶೇಷ ರೀತಿಯಲ್ಲಿ ವಿಶ್‌ ಮಾಡಿದ ಡಿವೈನ್​ ಸ್ಟಾರ್​ ರಿಷಭ್‌​ ಶೆಟ್ಟಿ

Rocking Star Yash

Sampriya

ಬೆಂಗಳೂರು , ಬುಧವಾರ, 8 ಜನವರಿ 2025 (14:38 IST)
Photo Courtesy X
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್‌ ಅವರ ಬರ್ತ್‌ಡೇಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಈ ನಡುವೆ ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್‌ ರಿಷಭ್‌ ಶೆಟ್ಟಿ ಅವರಿಂದ ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ.

ಯಶ್‌ ಅವರ ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ಟಾಕ್ಸಿಕ್ ಗ್ಲಿಂಪ್ಸ್ ನೋಡಿ ಫುಲ್‌ ಫಿದಾ ಆಗಿರುವ ರಿಷಭ್‌ ಶೆಟ್ಟಿ ಹಾಡಿ ಹೊಗಳಿದ್ದಾರೆ.  ರಿಷಬ್ ಶೆಟ್ಟಿ ವಿಶೇಷವಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಟಾಕ್ಸಿಕ್ ಬರ್ತ್‌ಡೇ ಪೀಕ್ ಗ್ಲಿಂಪ್ಸ್ ನೋಡಿ ಬೆರಗುಗೊಳಿಸುವಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಗೋವಾದಲ್ಲಿ ಮಧ್ಯರಾತ್ರಿ ಯಶ್ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಬರ್ತ್‌ಡೇ ಆಚರಿಸಿ ಯಶ್ ಖುಷಿಪಟ್ಟಿದ್ದಾರೆ. ನಟನ ಆಪ್ತ ಪಾನಿ ಪುರಿ ಕಿಟ್ಟಿ, ಕೆವಿಎನ್‌ ಸಂಸ್ಥೆಯ ರೂವಾರಿ ವೆಂಕಟ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಶುಭಕೋರಿದ್ದಾರೆ.

ಈ ಮೊದಲೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ಅಭಿಮಾನಿಗಳಿಗೆ ನೀವು ಇರುವ ಕಡೆಯಿಂದಲೇ ಹಾರೈಸಿ ಎಂದು ನಟ ತಿಳಿಸಿದ್ದರು. ಆದರೆ ಇದೀಗ ಟಾಕ್ಸಿಕ್ ಲುಕ್‌ನಿಂದ ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಫ್ಯಾನ್ಸ್ ನಿರೀಕ್ಷೆಗೆ ಅವರು ನಿರಾಸೆ ಮಾಡಿಲ್ಲ. ರಾಕಿ ಭಾಯ್ ಬರ್ತ್ಡೇ ಪ್ರಯುಕ್ತ 59 ಸೆಕೆಂಡ್ ಗ್ಲಿಂಪ್ಸ್ ರಿವೀಲ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಚಿತ್ರವಾಗಿದೆ. ರಿಲೀಸ್ ಆದ ಗ್ಲಿಂಪ್ಸ್‌ನಲ್ಲಿ ಕಲರ್‌ಫುಲ್ ಸೆಟ್‌ನಲ್ಲಿ ನಟನ ಸ್ಟೈಲೀಶ್ ವಾಕ್, ಹಾಟ್ ಮ್ಯಾನರಿಸಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಯಂತೆ, ರಮ್ಯಾಗೂ ಎಲ್ಲೇ ಹೋದ್ರೂ ಮಾಧ್ಯಮಗಳು ಕೇಳೋದು ಅದೊಂದೇ ಪ್ರಶ್ನೆ