Select Your Language

Notifications

webdunia
webdunia
webdunia
webdunia

Yash Birthday: ಎಷ್ಟೇ ದೊಡ್ಡ ಸ್ಟಾರ್ ಆದ್ರೂ ರಾಕಿಂಗ್ ಸ್ಟಾರ್ ಯಶ್ ಗಿದೆ ಇದೊಂದು ಅಭ್ಯಾಸ

Yash-Radhika Pandit

Krishnaveni K

ಬೆಂಗಳೂರು , ಬುಧವಾರ, 8 ಜನವರಿ 2025 (08:49 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಗೆ ಇಂದು ಜನ್ಮದಿನದ ಸಂಭ್ರಮ. ಕೆಜಿಎಫ್ ಬಳಿಕ ರಾಷ್ಟ್ರಮಟ್ಟದಲ್ಲಿ ಸ್ಟಾರ್ ಆಗಿದ್ದರೂ ಅವರಿಗೆ ಇದೊಂದು ಅಭ್ಯಾಸ ಈಗಲೂ ಇದೆ.

ಯಶ್ ಒಬ್ಬ ಕಂಪ್ಲೀಟ್ ಫ್ಯಾಮಿಲಿ ಮ್ಯಾನ್. ಯಶ್ ಮತ್ತು ರಾಧಿಕಾ ಪಂಡಿತ್ ಜೋಡಿ ಎಂದರೆ ಎಂದರೆ ಇಡೀ ಸ್ಯಾಂಡಲ್ ವುಡ್ ಗೆ ಐಡಿಯಲ್ ಕಪಲ್ ಎಂದು ಫೇಮಸ್. ಅಭಿಮಾನಿಗಳಿಗೂ ಮಾದರಿಯಾಗುವ ದಂಪತಿ.

ಯಶ್ ಮತ್ತು ರಾಧಿಕಾ ಇಬ್ಬರೂ ಜೊತೆಯಾಗಿ ಬಣ್ಣದ ಲೋಕದಲ್ಲಿ ಬೆಳೆದು ಮೇಲೆ ಬಂದವರು. ಒಂದೇ ಸೀರಿಯಲ್ ನಿಂದ ಇಬ್ಬರೂ ಎಂಟ್ರಿ ಕೊಟ್ಟವರು. ಹೀಗಾಗಿ ಅಲ್ಲಿಂದಲೇ ಇಬ್ಬರ ಸ್ನೇಹ ಸಂಬಂಧ ಶುರುವಾಗಿತ್ತು. ಬಳಿಕ ಅದು ಪ್ರೀತಿಗೆ ತಿರುಗಿತ್ತು.  

ಈ ಸೀರಿಯಲ್ ನಲ್ಲಿ ಇಬ್ಬರಿಗೂ ಕೆಲವೇ ಕೆಲವು ಸ್ನೇಹಿತರಿದ್ದಾರೆ. ವಿಶೇಷವೆಂದರೆ ಇವರೊಂದಿಗೆ ಯಶ್ ದಂಪತಿ ಇಂದಿಗೂ ಅದೇ ಸ್ನೇಹ ಸಂಬಂಧ ಇಟ್ಟುಕೊಂಡಿದ್ದಾರೆ. ಯಶ್ ಈಗ ನ್ಯಾಷನಲ್ ಸ್ಟಾರ್. ಖ್ಯಾತ ನಾಮರೆಲ್ಲರೂ ಅವರ ಜೊತೆಗೆ ಸ್ನೇಹ ಸಂಪಾದಿಸುವುದಕ್ಕೆ ಹಾತೊರೆಯುತ್ತಿದ್ದಾರೆ. ಹಾಗಿದ್ದರೂ ಯಶ್ ದಂಪತಿ ಮಾತ್ರ ಈಗಲೂ ಅವರೊಂದಿಗೆ ಸಮಯ ಸಿಕ್ಕಾಗೆಲೆಲ್ಲಾ ಒಟ್ಟಿಗೆ ಕಾಲ ಕಳೆಯುತ್ತಾರೆ. ಯಶ್ ಮನೆಯಲ್ಲಿ ಏನೇ ಸಂಭ್ರಮವಿದ್ದರೂ ಯಾರು ಇರ್ತಾರೋ ಇಲ್ವೋ ಈ ಸ್ನೇಹಿತರು ಮಾತ್ರ ಇದ್ದೇ ಇರುತ್ತಾರೆ. ಯಶ್ ಈಗಲೂ ಹಳೇ ಸ್ನೇಹಿತರ ಜೊತೆಗೆ ಪಾರ್ಟಿಯನ್ನೂ ಮಾಡುತ್ತಾರೆ, ಪತ್ನಿ ಜೊತೆ ಸಮಯ ಸಿಕ್ಕಾಗ ಚಿಕ್ಕ ಕಿರಾಣಿ ಅಂಗಡಿಗೆ ಹೋಗಿ ಬೇಕಾಗಿದ್ದು ಕೊಂಡು ತಿನ್ನುವ ಸರಳತೆಯೂ ಅವರಲ್ಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರೇಸಿಂಗ್‌ ತರಬೇತಿ ವೇಳೆ ನಟ ಅಜಿತ್ ಕುಮಾರ್‌ ಕಾರು ಭೀಕರ ಅಪಘಾತ: ಎದೆ ಝಲ್ಲೇನಿಸುತ್ತದೆ Video