Select Your Language

Notifications

webdunia
webdunia
webdunia
webdunia

Toxic movie: ಯಶ್ ಟಾಕ್ಸಿಕ್ ಮೂವಿ ಅಪ್ ಡೇಟ್: ಫ್ಯಾನ್ಸ್ ಇಟ್ರು ಎರಡು ಬೇಡಿಕೆ

Yash Toxic movie

Krishnaveni K

ಬೆಂಗಳೂರು , ಸೋಮವಾರ, 6 ಜನವರಿ 2025 (12:10 IST)
Photo Credit: X
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನ್ಮದಿನದ ನಿಮಿತ್ತ ಟಾಕ್ಸಿಕ್ ಸಿನಿಮಾ ಅಪ್ ಡೇಟ್ ಒಂದು ಬರಲಿದೆ ಎಂಬ ಸುದ್ದಿಗಳ ನಡುವೆಯೇ ಅಭಿಮಾನಿಗಳು ಎರಡು ಬೇಡಿಕೆ ಮುಂದಿಟ್ಟಿದ್ದಾರೆ.

ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಜನ್ಮದಿನವಿದೆ. ಈ ದಿನಕ್ಕೆ ಟಾಕ್ಸಿಕ್ ಸಿನಿಮಾ ತಂಡದಿಂದ ಅಪ್ ಡೇಟ್ ನಿರೀಕ್ಷಿಸಲಾಗುತ್ತಿದೆ. ಚಿತ್ರತಂಡ ಕೂಡಾ ಈ ಬಗ್ಗೆ ಸುಳಿವು ನೀಡಿದೆ. ಟಾಕ್ಸಿಕ್ ಗ್ಲಿಂಪ್ಸ್ ವಿಡಿಯೋ ರಿಲೀಸ್ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಹೀಗಾಗಿ ಅಭಿಮಾನಿಗಳಲ್ಲಿ ಒಂದು ರೀತಿಯ ಕುತೂಹಲವಿದೆ.

ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಯಶ್ ಅಭಿಮಾನಿಗಳು ಚಿತ್ರತಂಡದ ಬಳಿ ಎರಡು ಬೇಡಿಕೆಯಿಟ್ಟಿದ್ದಾರೆ. ಕೆಜಿಎಫ್ 2 ಬಳಿಕ ಯಶ್ ಸಿನಿಮಾ ಬಂದಿಲ್ಲ. ಹೀಗಾಗಿ ಈಗ ಟಾಕ್ಸಿಕ್ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ. ಯಶ್ ಸಿನಿಮಾದ ಒಂದು ಅಪ್ ಡೇಟ್ ಗಾಗಿ ಕಾಯುತ್ತಿದ್ದಾರೆ.

ಈ ನಡುವೆ ಅಭಿಮಾನಿಗಳು ಟಾಕ್ಸಿಕ್ ಸಿನಿಮಾದ ಟೀಸರ್ ಜೊತೆಗೆ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಿ ಎಂದು ಎರಡು ಬೇಡಿಕೆ ಮುಂದಿಟ್ಟಿದ್ದಾರೆ. ಇದರಲ್ಲಿ ಒಂದು ಈಡೇರುವುದು ಖಿಚತವಾಗಿದೆ. ಆದರೆ ರಿಲೀಸ್ ಡೇಟ್ ಕೂಡಾ ಪ್ರಕಟವಾಗುತ್ತಿದೆಯೇ ಎಂದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Vishal: ತಮಿಳಿನ ಖ್ಯಾತ ನಟ ವಿಶಾಲ್ ಸ್ಥಿತಿ ಏನಾಗಿದೆ ವಿಡಿಯೋ ನೋಡಿ