Select Your Language

Notifications

webdunia
webdunia
webdunia
Saturday, 12 April 2025
webdunia

ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರೀಕರಣ ಶುರು ಮಾಡಬೇಕೆಂದ ಯಶ್‌ ಉದ್ದೇಶವೇನು?

KGF Star Yash

Sampriya

ಮುಂಬೈ , ಬುಧವಾರ, 3 ಏಪ್ರಿಲ್ 2024 (19:19 IST)
photo Courtesy Instagram
ಮುಂಬೈ: ಕೆಜಿಎಫ್ ಖ್ಯಾತಿಯ ನಟ ಯಶ್ ಅವರು ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಚಿತ್ರಿಕರಣವನ್ನು ಕರ್ನಾಟಕದಲ್ಲಿ ಶೀಘ್ರದಲ್ಲೇ ಆರಂಭಿಸಲಿದ್ದಾರೆ.

ಗೀತು ಮೋಹನ್ ದಾಸ್ ನಿರ್ದೇಶನದ ಮತ್ತು ವೆಂಕಟ್ ಕೆ ನಾರಾಯಣ ಅವರ ಕೆವಿಎನ್ ಪ್ರೊಡಕ್ಷನ್ಸ್‌ ಹಾಗೂ ಯಶ್ ಮಾಸ್ಟರ್ ಮೈಂಡ್ ಕ್ರಿಯೇಶನ್‌ನಲ್ಲಿ ಚಿತ್ರ ನಿರ್ಮಾಣಗೊಳ್ಳುತ್ತಿದೆ.

ಚಿತ್ರದ ಶೂಟಿಂಗ್ ಬಗ್ಗೆ ಮಾತನಾಡಿದ ವೆಂಕಟ್ ಅವರು,  ಇಂದು ಸೂಕ್ತ ಸೌಲಭ್ಯಗಳ ಕೊರತೆಯಿಂದಾಗಿ ಹೆಚ್ಚಿನ ಎಲ್ಲ ಚಿತ್ರಗಳು ಬೇರೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಚಿತ್ರೀಕರಣಗೊಳುತ್ತದೆ. ಆದರೆ ಯಶ್ ಅವರ ಕಾಳಜಿಯಂತೆ ನಗರದ ಪ್ರತಿಭೆಗಳಿಗೆ ಅವಕಾಶ ಸಿಗಬೇಕೆಂಬ ದೃಷ್ಟಿಯಿಂದ ಕರ್ನಾಟಕದಲ್ಲೇ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ.

ಈ ಮೂಲಕ ಬೃಹತ್ ಸೆಟ್‌ಗಳನ್ನು ನಿರ್ಮಿಸಿದ್ದು, ನಗರ ತಂತ್ರಜ್ಞರಿಗೆ, ಉದಯೋನ್ಮುಖ ಪ್ರತಿಭೆಗಳಿಗೆ ಅನೇಕ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗಿದೆ.

ಡಿಸೆಂಬರ್ 2023 ರಲ್ಲಿ, ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋದೊಂದಿಗೆ ಚಿತ್ರದ ಶೀರ್ಷಿಕೆಯನ್ನು ಘೋಷಿಸಿದ್ದರು.

ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ ಈ ಚಿತ್ರವು ಆಕ್ಷನ್-ಆಧಾರಿತ ಚಿತ್ರ ಎಂದು ಹೇಳಲಾಗಿದೆ. ಕೆಜಿಎಫ್ ಸಿನಿಮಾಗಳ ಯಶಸ್ಸಿನ ನಂತರ ನಟ ಯಶ್ ಮನೆಮಾತಾಗಿದ್ದು, ಇದೀಗ ಅವರನ್ನು 'ಟಾಕ್ಸಿಕ್' ಚಿತ್ರದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಇನ್ನೂ ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವಿದ್ದು, ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಅವರು ಯಶ್ ಸಹೋದರಿಯಾಗಿ ಬಣ್ಣ ಹಚ್ಚಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

'ಹಾಯ್ ಫ್ರೆಂಡ್ಸ್' ಎನ್ನುತ್ತಾ ಕಿರುತೆರೆಗೆ ಎಂಟ್ರಿ ಕೊಟ್ಟ ರೀಲ್ಸ್‌ ಕ್ವೀನ್‌ ರೇಷ್ಮಾ