ಚೆನ್ನೈ: ತಮಿಳಿನ ಖ್ಯಾತ ನಟ ವಿಶಾಲ್ ಸಿನಿಮಾ ಪ್ರಮೋಷನ್ ವೇಳೆ ವೇದಿಕೆಯಲ್ಲಿ ಎದ್ದು ನಿಲ್ಲಲೂ ಆಗದ ಸ್ಥಿತಿಯಲ್ಲಿ ಇರುವುದು ನೋಡಿ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ತಮಿಳಿನಲ್ಲಿ ಮಾಸ್ ಸಿನಿಮಾಗಳನ್ನು ನೀಡಿದ ವಿಶಾಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರಿಗೆ ಇನ್ನೂ 47 ವರ್ಷ. ಇದೀಗ ತಮ್ಮದೇ ಅಭಿನಯದ ಮದ ಗಜ ರಾಜ ಸಿನಿಮಾ ರಿಲೀಸ್ ಸಂಭ್ರಮದಲ್ಲಿದ್ದಾರೆ. ಇದೇ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಕ್ಕೆ ಅವರು ಬಂದಿದ್ದರು.
ವೇದಿಕೆಯಲ್ಲಿ ಅವರನ್ನು ಕರೆದು ಮಾತನಾಡಲು ಮೈಕ್ ನೀಡಿದಾಗ ವಿಶಾಲ್ ಅಕ್ಷರಶಃ ನಡುಗುತ್ತಿದ್ದರು. ಕೊನೆಗೆ ಅವರು ಎದ್ದು ನಿಲ್ಲಲೂ ಆಗುತ್ತಿಲ್ಲ ಎಂದಾಗ ಸಹಾಯಕರು ಬಂದು ಅವರನ್ನು ಸೋಫಾ ಮೇಲೆ ಕೂರಿಸಿದರು. ಬಳಿಕ ಕುಳಿತುಕೊಂಡೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ಅಭಿಮಾನಿಗಳು ವಿಶಾಲ್ ಗೆ ನಿಜವಾಗಿಯೂ ಏನಾಗಿದೆ? ಯಾಕೆ ಅವರು ಹೀಗೆ ನಡುಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರಿಗೆ ತೀವ್ರ ಜ್ವರವಿತ್ತು. ಹಾಗಿದ್ದರೂ ಸಿನಿಮಾ ಪ್ರಮೋಷನ್ ಗೆ ತೊಂದರೆಯಾಗಬಾರದು ಎಂದು ಬಂದಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.