ಬೆಂಗಳೂರು: ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಗೆ ಇಂದು ಜನ್ಮದಿನದ ಸಂಭ್ರಮ. ಈ ದಿನದಂದು ಅವರ ಟಾಪ್ 10 ಹಾಡುಗಳ ಬಗ್ಗೆ ನೋಡೋಣ. ಇದರಲ್ಲಿ ನಿಮ್ಮ ಮೆಚ್ಚಿನ ಹಾಡು ಯಾವುದು ಹೇಳಿ.
ರೋಜಾ ಸಿನಿಮಾದಿಂದ ಇತ್ತೀಚೆಗಿನವರೆಗೂ ಎಆರ್ ರೆಹಮಾನ್ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವರ ಹಾಡುಗಳಲ್ಲಿ ಸಣ್ಣ ಮ್ಯೂಸಿಕ್ ಇನ್ಸ್ಟ್ರುಮೆಂಟ್ ನ ಶಬ್ಧವೂ ಕೇಳುಗರ ಗಮನ ಸೆಳೆಯುವುದೇ ವಿಶೇಷ. ಅವರ ಹೆಚ್ಚಿನ ಹಾಡುಗಳಲ್ಲಿ ತಬಲಾ, ಹಾರ್ಮೋನಿಯಂ ಸೇರಿದಂತೆ ಸಾಂಪ್ರದಾಯಿಕ ಗಝಲ್ ಶೈಲಿಯ ಝಲಕ್ ಕಾಣಬಹುದಾಗಿದೆ. ಈ ಕಾರಣಕ್ಕೇ ಕೇಳಗರಿಗೆ ಅವರ ಹಾಡುಗಳು ಇಷ್ಟವಾಗುತ್ತದೆ.
ಎಆರ್ ರೆಹಮಾನ್ ಎವರ್ ಗ್ರೀನ್ ಹಾಡುಗಳು
-
ಏ ಹಸೀಂ ವಾದಿಯಾ: ರೋಜಾ ಸಿನಿಮಾದ ಈ ಹಾಡು ಇಂದಿಗೂ ಯುವ ಪ್ರೇಮಿಗಳಿಂದ ಹಿಡಿದು ರೀಲ್ಸ್ ಮಾಡೋರವರೆಗೂ ಎವರ್ ಗ್ರೀನ್ ಫೇವರಿಟ್. ಎಸ್ ಪಿ ಬಾಲಸುಬ್ರಹ್ಮಣ್ಯಂ, ಕೆಎಸ್ ಚಿತ್ರಾ ಮತ್ತು ಎಆರ್ ರೆಹಮಾನ್ ಈ ಹಾಡಿಗೆ ಧ್ವನಿ ನೀಡಿದ್ದಾರೆ.
-
ಕೆಹ್ನಾ ಹೇ ಕ್ಯಾ: ಕೆಎಸ್ ಚಿತ್ರಾ ಅವರು ಹಾಡಿದ ಈ ಹಾಡು ಬಾಂಬೆ ಸಿನಿಮಾದ್ದು. ದುಃಖ ಮತ್ತು ಸಂತೋಷ ಎರಡೂ ಭಾವನೆಗಳನ್ನು ಈ ಹಾಡಿನಲ್ಲಿ ನೋಡಬಹುದು.
-
ಸಾಥಿಯಾ: ಸಾಥಿಯಾ ಸಿನಿಮಾದ ಈ ಹಾಡು ಯವ ಪ್ರೇಮಿಗಳ ಮೆಚ್ಚಿನ ಹಾಡು. ಹಿಂದಿಯಲ್ಲಿ ಸೋನು ನಿಗಂ ಮಧುರ ಧ್ವನಿಯಲ್ಲಿ ಈ ಹಾಡು ಹಾಡಿದ್ದಾರೆ.
-
ಮುಕ್ಕಾಲ ಮುಕ್ಕಾಬುಲ್ಲಾ: ಮನೊ ಹಾಗೂ ಸ್ವರ್ಣಲತಾ ಹಾಡಿದ ಈ ಹಾಡು ಪಡ್ಡೆ ಹೈಕಗಳಿಂದ ಹಿಡಿದು ವಯೋವೃದ್ಧರ ಬಾಯಲ್ಲಿ ಕುಣಿಯುತ್ತಿದ್ದ ಹಾಡು. ಕಾದಲನ್ ಸಿನಿಮಾದ ಹಾಡು ಇದಾಗಿದೆ.
-
ಚಯ್ಯಾ ಚಯ್ಯಾ: ಚಲಿಸುತ್ತಿರುವ ರೈಲಿನ ಮೇಲೆ ನಾಯಕ ನಾಯಕಿ ಕುಣಿಯುವ ಈ ಹಾಡು ಒಂದು ಕಾಲದ ಸೂಪರ್ ಹಿಟ್ ಹಾಡು. ಸುಖ್ ವಿಂದರ್ ಸಿಂಗ್, ಸ್ವಪ್ನ ಅವಸ್ಥಿ ಹಾಡಿದ್ದಾರೆ.
-
ಮಸಕ್ಕಲಿ: ಡೆಲ್ಲಿ 6 ಸಿನಿಮಾದ ಈ ಹಾಡನ್ನು ಮೋಹಿತ್ ಚೌಹಾಣ್ ಹಾಡಿದ್ದಾರೆ. ಎಆರ್ ರೆಹಮಾನ್ ಕನ್ಸರ್ಟ್ ಗಳಲ್ಲಿ ಈಗಲೂ ಇದು ಟಾಪ್ ಹಾಡಾಗಿರುತ್ತದೆ.
-
ತು ಹೀ ರೇ: ಬಾಂಬೆ ಸಿನಿಮಾದ ಈ ಹಾಡನ್ನು ಯಾರು ತಾನೇ ಮರೆಯಲು ಸಾಧ್ಯ? ಹರಿಹರನ್ ಮತ್ತು ಕವಿತಾ ಕೃಷ್ಣಮೂರ್ತಿ ಹಾಡಿದ ಹಾಡು ಇದಾಗಿದೆ.
-
ವಂದೇ ಮಾತರಂ: ದೇಶಭಕ್ತಿಯನ್ನು ಬಡಿದೇಳಿಸುವ ವಂದೇ ಮಾತರಂ ಹಾಡು ಸಿನಿಮಾಗಾಗಿ ಮಾಡಿದ ಹಾಡು ಅಲ್ಲದೇ ಇದ್ದರೂ ಅಷ್ಟೇ ಮ್ಯಾಜಿಕ್ ಮಾಡಿತ್ತು. ಸ್ವತಃ ಎಆರ್ ರೆಹಮಾನ್ ಇದನ್ನು ಹಾಡಿದ್ದಾರೆ.
-
ಕ್ವಾಜಾ ಮೇರೇ ಕ್ವಾಜಾ: ಎಆರ್ ರೆಹಮಾನ್ ತಮಗೆ ಗಝಲ್ ಶೈಲಿಯ ಹಾಡಿನ ಮೇಲಿರುವ ಪ್ರೀತಿಯನ್ನು ಸಾರಿ ಹೇಳಿರುವ ಹಾಡು ಇದು. ಜೋಧಾ ಅಕ್ಬರ್ ಸಿನಿಮಾದ ಈ ಹಾಡನ್ನು ಅವರೇ ಹಾಡಿದ್ದಾರೆ.
-
ಜೈ ಹೋ: ಎಆರ್ ರೆಹಮಾನ್ ಗೆ ಆಸ್ಕರ್ ಗೆದ್ದುಕೊಟ್ಟ ಸ್ಲಂ ಡಾಗ್ ಮಿಲಿಯನೇರ್ ಸಿನಿಮಾದ ಹಾಡು. ಇದಕ್ಕೆ ನಮ್ಮ ಕನ್ನಡದ ಹೆಮ್ಮೆಯ ವಿಜಯ್ ಪ್ರಕಾಶ್ ಕೂಡಾ ಹಾಡಿದ್ದಾರೆ ಎನ್ನುವುದು ವಿಶೇಷ.