Select Your Language

Notifications

webdunia
webdunia
webdunia
webdunia

ಮದುವೆಗೆ ಮುಂಚೆನೇ ಈ ಕೆಲಸ ಮಾಡಿದ ಡಾಲಿ ಧನಂಜಯ್: ಏನದು

ಮದುವೆಗೆ ಮುಂಚೆನೇ ಈ ಕೆಲಸ ಮಾಡಿದ ಡಾಲಿ ಧನಂಜಯ್: ಏನದು

Sampriya

ಬೆಂಗಳೂರು , ಶನಿವಾರ, 4 ಜನವರಿ 2025 (15:29 IST)
Photo Courtesy X
ಬೆಂಗಳೂರು: ನಟ ಡಾಲಿ ಧನಂಜಯ್ ಮುಂದಿನ ತಿಂಗಳು ವೈದ್ಯೆ ಧನ್ಯತಾ ಜೊತೆ ವಿವಾಹವಾಗುತ್ತಿದ್ದಾರೆ. ಮದುವೆಗೆ ಮುಂಚೆ ಧನಂಜಯ್‌ ಅವರು ಸಾಮಾಜಿಕ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದಾರೆ.

ಧನಂಜಯ್ ಹುಟ್ಟೂರಿನಲ್ಲಿದ್ದ ಸರ್ಕಾರಿ ಶಾಲೆ ಕುಸಿಯುವ ಭೀತಿಯಲ್ಲಿತ್ತು. ಗೋಡೆಗಳು ಬಿರುಕು ಬಿಟ್ಟಿದ್ದವು, ಛಾವಣಿ ಸೋರುತ್ತಿತ್ತು, ನೆಲ ಹಾಸು ಕಿತ್ತೇ ಹೋಗಿತ್ತು. ಇನ್ನೂ ಕೆಲವು ಸಮಸ್ಯೆಗಳು ಶಾಲೆಯಲ್ಲಿದ್ದವು. ಇದೀಗ ಡಾಲಿ ಧನಂಜಯ್ ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಯನ್ನು ನವೀಕರಣ ಮಾಡುತ್ತಿದ್ದಾರೆ.

ಡಾಲಿ ಧನಂಜಯ್ ಹುಟ್ಟೂರಾದ ಕಾಳೇನಹಳ್ಳಿಯಲ್ಲಿ 1 ರಿಂದ 7 ನೇ ತರಗತಿವರೆಗಿನ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲಗೊಂಡಿತ್ತು. ಇದನ್ನು ಗಮನಿಸಿದ ಡಾಲಿ ಧನಂಜಯ್ ಇಡೀ ಶಾಲೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ.

ಶಾಲೆಯ ಶಿಥಿಲಗೊಂಡಿದ್ದ ಗೋಡೆ ಮತ್ತು ತಾರಸಿ ದುರಸ್ತಿ ಮಾಡಿಸುತ್ತಿದ್ದಾರೆ. ಶಿಥಿಲವಾಗಿದ್ದ ನೆಲ ಹಾಸನ್ನು ತೆಗೆಸಿ ಹೊಸ ಟೈಲ್ಸ್ ಹಾಕಿಸುತ್ತಿದ್ದಾರೆ. ಶಿಕ್ಷಕರ ಕೊಠಡಿಯನ್ನು ನವೀಕರಣಗೊಳಿಸುತ್ತಿದ್ದಾರೆ. ಗೇಟ್ ದುರಸ್ತಿ, ಕಾಂಪೌಂಡ್ ದುರಸ್ತಿ, ಇಡೀ ಶಾಲೆಗೆ ಬಣ್ಣ, ಶೌಚಾಲಯ ನವೀಕರಣ, ಹೊಸ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್, ಸುಸಜ್ಜಿತ ಅಡುಗೆ ಮನೆ ಇನ್ನಿತರೆಗಳನ್ನು ಡಾಲಿ ಧನಂಜಯ್ ಮಾಡಿಸಿಕೊಡುತ್ತಿದ್ದಾರೆ.

ಡಾಲಿ ಧನಂಜಯ್ ಖುದ್ದಾಗಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರೊಡನೆ, ಶಾಲೆಯ ಎಸ್​ಡಿಎಂಸಿ ಸದಸ್ಯರೊಡನೆ ಮಾತನಾಡಿದ್ದು, ಶಾಲೆಗೆ ಅಗತ್ಯವಾದ ನವೀಕರಣ ಮಾಡಿಸುತ್ತಿದ್ದಾರೆ. ದುರಸ್ತಿ ಹಾಗೂ ಮರುನಿರ್ಮಾಣ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕೆಲವೇ ವಾರಗಳಲ್ಲಿ ಶಾಲೆಗೆ ಹೊಸ ರೂಪ ಸಿಗಲಿದೆ. ಡಾಲಿ ಧನಂಜಯ್ ಮಾಡುತ್ತಿರುವ ಈ ಸಾಮಾಜಿಕ ಕಾರ್ಯಕ್ಕೆ ಊರಿನವರಿಂದ ಮತ್ತು ಅಭಿಮಾನಿಗಳಿಂದ ಪ್ರಶಂಸೆ ದೊರೆತಿದೆ.

ಡಾಲಿ ಧನಂಜಯ್  ಮದುವೆ ಫೆಬ್ರವರಿ 16 ರಂದು ವೈದ್ಯೆ ಧನ್ಯತಾ ಜೊತೆಗೆ ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್‌ ಗೆದ್ದ ಬಳಿಕ ಶಿವಣ್ಣ ಡಿಸ್ಚಾರ್ಜ್‌: ಆಸ್ಪತ್ರೆ ಪಕ್ಕ ಜಾಲಿಮೂಡ್‌ನಲ್ಲಿ ಹ್ಯಾಟ್ರಿಕ್‌ ಹೀರೋ