Select Your Language

Notifications

webdunia
webdunia
webdunia
Tuesday, 1 April 2025
webdunia

ದುಬಾರಿ ಕಾರು ಬಿಟ್ಟು ಮೆಟ್ರೋ ಏರಿದ ಈ ಸ್ಯಾಂಡಲ್ ವುಡ್ ಸ್ಟಾರ್ ಗುರುತಿಸಿ ನೋಡೋಣ

Koti Cinema

Sampriya

ಬೆಂಗಳೂರು , ಸೋಮವಾರ, 24 ಜೂನ್ 2024 (19:28 IST)
photo Courtesy Instagram
ಬೆಂಗಳೂರು:  'ಕೋಟಿ' ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿರುವ ಬೆನ್ನಲ್ಲೇ ನಟ ಡಾಲಿ ಧನಂಜಯ್ ಅವರು  ತನ್ನ ಕಾರು ಬದಿಗಿಟ್ಟು ಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಡಾಲಿ ಧನಂಜಯ್‌ ಅವರು ಪ್ರಯಾಣಿಸುತ್ತಿರುವ ಪೋಟೋ ವೈರಲ್ ಆಗಿದೆ.

ಇನ್ನು ಧನಂಜಯ್ ಅವರು ಯಾರಿಗೂ ಪರಿಚಯ ಸಿಗಬಾರದೆಂದು ಮಾಸ್ಕ್, ಟೋಪಿ, ಕನ್ನಡಕ್ಕ ಧರಿಸಿ ಪ್ರಯಾಣಿಸಿದ್ದಾರೆ.  ಕೆಂಗೇರಿಯಿಂದ ಕುಂದನಹಳ್ಳಿ ವರೆಗೂ ಪ್ರಯಾಣ ಮಾಡಿದ್ದಾರೆ. ಸದ್ಯ ಡಾಲಿ ಧನಂಜಯ್ ಅವರು ಕೋಟಿ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವ ಖಷಿಯಲ್ಲಿದ್ದಾರೆ.

ಇದೀಗ ಖ್ಯಾತ ನಟ ಜನಸಾಮಾನ್ಯರಂತೆ ಪ್ರಯಾಣ ಬೆಳೆಸಿರುವುದನ್ನು ನೋಡಿದ ನೆಟ್ಟಿಗರು ಧನಂಜಯ್ ಸರಳತೆಗೆ ಫಿದಾ ಆಗಿದ್ದಾರೆ.

 ಪರಮೇಶ್ವರ್‌ ಗುಂಡ್ಕಲ್‌ ಮೊದಲ ಬಾರಿಗ್ ಆ್ಯಕ್ಷನ್ ಕಟ್ ಹೇಳಿ ಕೋಟಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಚಂದನವನದಲ್ಲಿ ಕೋಟಿ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಒಳ್ಳೆಯ ಪ್ರಶಂಸೆಯೊಂದಿಗೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಫ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿಗೆ ಕನ್ನಡದಲ್ಲೇ ಬೇಡಿಕೆ ಜಾಸ್ತಿ