Select Your Language

Notifications

webdunia
webdunia
webdunia
webdunia

ನಟ ವಿಜಯ್ ಬರ್ತಡೇ: ಕರಾಟೆ ಪ್ರದರ್ಶಿಸುತ್ತಿದ್ದ ಬಾಲಕನ ಮೇಲೆ ಆವರಿಸಿದ ಬೆಂಕಿ

marticial arts

Sampriya

ಚೆನ್ನೈ , ಸೋಮವಾರ, 24 ಜೂನ್ 2024 (18:41 IST)
Photo Courtesy X
ಚೆನ್ನೈ: ನಟ ವಿಜಯ್ ಅವರ 50 ನೇ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ 14 ವರ್ಷದ ಬಾಲಕನೊಬ್ಬ ಮಾರ್ಷಲ್ ಆರ್ಟ್ಸ್ ಸಾಹಸ ಪ್ರದರ್ಶಿಸುತ್ತಿದ್ದಾಗ ಆಗಬೇಕಿದ್ದ ದೊಡ್ಡ ಅವಘಡದಿಂದ ಪಾರಾಗಿದ್ದಾನೆ.

ವೇದಿಕೆ ಮೇಲೆ ಕರಾಟೆ ಪ್ರದರ್ಶಿಸುವಾಗ, ಹೆಂಚಿನ ಮೇಲೆ ಬೆಂಕಿ ಹಾಕಿದ್ದು, ಅದನ್ನು ಒಡೆಯುವ ಸಂದರ್ಭ ಬೆಂಕಿ ಬಾಲಕನ ಕೈಗೆ ಆವರಿಸಿಕೊಂಡಿದೆ. ತದನಂತರ ಆತನ ಮೈಮೇಲೆ ಎಲ್ಲ ಅವರಿಸಿಕೊಂಡಿದೆ. ಅದಲ್ಲದೆ ಅಲ್ಲೆ ಇದ್ದ ಮತ್ತೊಬ್ಬ ವ್ಯಕ್ತಿ ಹಾಗೂ ನೆಲದ ಮೇಲೆ ಆವರಿಸಿಕೊಂಡಿದೆ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ಮೈ ಜುಮ್ಮೆನಿಸುತ್ತದೆ.  

ಅದೃಷ್ಟವಶಾತ್ ಬಾಲಕ ದೊಡ್ಡ ಅಪಾಯದಿಂದ ಪಾರಾಗಿದ್ದಾನೆ.  ಇನ್ನೂ ನಟ ವಿಜಯ್ ಅವರು ಕಲ್ಲಕುರಿಚಿಯಲ್ಲಿ ನಡೆದ ಕಳ್ಳಬಟ್ಟಿ ದುರಂತದ ಹಿನ್ನೆಲೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಾಗ ಹೇಳಿಕೊಂಡಿದ್ದರು. ಅದಲ್ಲದೆ ಈ ಬಗ್ಗೆ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ, ನಟ ವಿಜಯ್ ಪಕ್ಷದ ಪದಾಧಿಕಾರಿಗಳಿಗೆ ಹುಟ್ಟು ಹಬ್ಬ ಆಚರಿಸಿದಂತೆ ಸೂಚಿಸಿದ್ದರು.ಆದಾಗ್ಯೂ ಅವರ ಅಭಿಮಾನಿಗಳು ರಾಜ್ಯಾದ್ಯಂತ ಹಲವಾರು ಸ್ಥಳಗಳಲ್ಲಿ ಆಚರಣೆಗಳನ್ನು ಆಯೋಜಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೂರಜ್, ಪ್ರಜ್ವಲ್ ಜತೆ ದರ್ಶನ್ ಫೋಟೋಗೆ ಫೋಸ್: ಸಾಮಾಜಿಕ ಜಾಲತಾಣದಲ್ಲಿ ವೈರಲ್