Select Your Language

Notifications

webdunia
webdunia
webdunia
webdunia

ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ: 30 ಮಂಗಗಳ ಮಾರಣಹೋಮ

Monkey

sampriya

ಚಿಕ್ಕಮಗಳೂರು , ಶನಿವಾರ, 8 ಜೂನ್ 2024 (12:38 IST)
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು ಬಳಿಕ 30 ಮಂಗಗಳನ್ನು ಹತ್ಯೆ ಮಾಡಿರುವ ದಾರುಣ ವರದಿಯಾಗಿದೆ.

ಜಿಲ್ಲೆಯ ಎನ್​​.ಆರ್​.ಪುರ ತಾಲೂಕಿನ ದ್ಯಾವಣ ಗ್ರಾಮದ ನಡೆದಿದೆ. ಬಾಳೆಹಣ್ಣು ತಿಂದು ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು 16 ಗಂಡು, 14 ಹೆಣ್ಣು ಹಾಗೂ 4 ಮರಿಗಳನ್ನು ಹತ್ಯೆ ಮಾಡಲಾಗಿದೆ.  ಬಳಿಕ ಅವುಗಳನ್ನು ತಂದು ರಸ್ತೆಗೆ ಎಸೆಯಲಾಗಿದೆ.  

ವಿಷಯ ತಿಳಿದು ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಡಿ.ಎಫ್.ಓ, ಆರ್.ಎಫ್.ಓ, ಪಿ.ಎಸ್.ಐ, ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ ಅಧಿಕಾರಿಗಳು ಹಾಗೂ ಆಶಾಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಲ್ಕು ಮರಿಗಳನ್ನು ಒಳಗೊಂಡಂತೆ ಈ 30 ಕೋತಿಗಳಿಗೆ ವಿಷಕಾರಿ ಪದಾರ್ಥವನ್ನು ನೀಡಿ ನಂತರ ಥಳಿಸಿ ಸಾಯಿಸಲಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಎಂದು ಹಿರಿಯ ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರಪ್ರದೇಶದ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಈಗ ಚಂದ್ರಬಾಬು ನಾಯ್ಡು ಭಯ