Select Your Language

Notifications

webdunia
webdunia
webdunia
webdunia

ಬಳ್ಳಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್: ಟಾಕ್ಸಿಕ್ ಲುಕ್ ರಿವೀಲ್

Yash Toxic movie

Krishnaveni K

ಬೆಂಗಳೂರು , ಗುರುವಾರ, 29 ಫೆಬ್ರವರಿ 2024 (12:28 IST)
Photo Courtesy: Twitter
ಬೆಂಗಳೂರು: ಟಾಕ್ಸಿಕ್ ಮೂವಿ ಕೆಲಸದ ಬ್ಯುಸಿಯ ನಡುವೆಯೂ ರಾಕಿಂಗ್ ಸ್ಟಾರ್ ಯಶ್ ಇಂದು ಬಳ್ಳಾರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರ ವಿಶಿಷ್ಟ ಹೇರ್ ಸ್ಟೈಲ್, ದಾಡಿ ರಿವೀಲ್ ಆಗಿದ್ದು,  ಇದು ಟಾಕ್ಸಿಕ್ ಲುಕ್ ಎನ್ನಲಾಗುತ್ತಿದೆ.

ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಜೊತೆ ಭಟ್ಕಳದಲ್ಲಿ ಕಾಂಡಿಮೆಂಟ್ ಅಂಗಡಿಯೊಂದರಲ್ಲಿ ಕುಲ್ಫೀ, ಚಾಕಲೇಟ್ ಖರೀದಿ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಇದೀಗ ಯಶ್ ಮತ್ತೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರ ದಾಡಿ, ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.

ಇದು ಟಾಕ್ಸಿಕ್ ಮೂವಿ ಲುಕ್ ಎನ್ನಲಾಗುತ್ತಿದೆ. ಸಾಂಪ್ರದಾಯಿಕ ಡ್ರೆಸ್ ನಲ್ಲಿ ಅಭಿಮಾನಿಗಳೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ಯಶ್ ಬಳ್ಳಾರಿಗೆ ಭೇಟಿ ಕೊಟ್ಟಿದ್ದು ಯಾಕೆ ಗೊತ್ತಾ? ಬಳ್ಳಾರಿಯಲ್ಲಿ ಶ್ರೀ ಅಮೃತೇಶ್ವರ ದೇವಾಲಯದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯಶ್ ಬಳ್ಳಾರಿಗೆ ಬಂದಿದ್ದಾರೆ.

ಬಳ್ಳಾರಿಯ ಜಿಂದಾಲ್ ವಿಜಯನಗರ ಏರ್ ಪೋರ್ಟ್ ಗೆ ಯಶ್ ಬಂದಿಳಿದಿದ್ದಾರೆ. ಅವರ ಜೊತೆಗೆ ಟಾಕ್ಸಿಕ್ ಮೂವಿ ನಿರ್ಮಾಪಕ ಕೆವಿಎನ್ ಕೂಡಾ ಇದ್ದರು. ಯಶ್ ಬಳ್ಳಾರಿಗೆ ಬರುತ್ತಿದ್ದಾರೆಂದು ತಿಳಿದು ಸಾಕಷ್ಟು ಜನ ಅಭಿಮಾನಿಗಳು ಇಲ್ಲಿ ಸೇರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಹೇಳನ ಸುದ್ದಿ ಹರಡದಂತೆ ಕೋರ್ಟ್ ನಿಂದ ತಡೆ ತಂದ ನಟ ಜಗ್ಗೇಶ್