Select Your Language

Notifications

webdunia
webdunia
webdunia
webdunia

ಹನುಮಾನ್ ನಲ್ಲಿ ರಾಕಿಂಗ್ ಸ್ಟಾರ್ ಯಶ್: ಪಾತ್ರವೇನು?

Yash

Krishnaveni K

ಬೆಂಗಳೂರು , ಬುಧವಾರ, 14 ಫೆಬ್ರವರಿ 2024 (12:25 IST)
ಬೆಂಗಳೂರು: ಟಾಕ್ಸಿಕ್ ಸಿನಿಮಾ ಘೋಷಣೆ ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾಗೆ ಬಗ್ಗೆ ದಿನಕ್ಕೊಂದು ರೂಮರ್ ಕೇಳಿಬರುತ್ತಿದೆ.

ಟಾಕ್ಸಿಕ್ ಒಪ್ಪಿಕೊಂಡ ಬೆನ್ನಲ್ಲೇ ಯಶ್ ಬಾಲಿವುಡ್ ನಲ್ಲಿ ರಾಮಾಯಣ ಮತ್ತು ಶಾರುಖ್ ಖಾನ್ ಜೊತೆ ಇನ್ನೊಂದು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಅದರ ಬೆನ್ನಲ್ಲೇ ಈಗ ಟಾಲಿವುಡ್ ಅಂಗಳದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಯಶ್ ಹನುಮಾನ್ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಪ್ರಶಾಂತ್ ವರ್ಮ ನಿರ್ದೇಶನದ ತೆಲುಗು ಸಿನಿಮಾ ‘ಹನುಮಾನ್’ ರಿಲೀಸ್ ಆಗಿ ಭಾರೀ ಹಿಟ್ ಆಗಿತ್ತು. ಪರಭಾಷಿಕರನ್ನೂ ಈ ಸಿನಿಮಾ ಸೆಳೆದಿತ್ತು.  ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ಇದೀಗ ಆ ಸಿನಿಮಾದ ಮುಂದಿನ ಭಾಗ ನಿರ್ಮಾಣ ಮಾಡಲಾಗುತ್ತಿದೆ.

ಹನುಮಾನ್ 2 ಸಿನಿಮಾದ ಪಾತ್ರವರ್ಗದ ಬಗ್ಗೆ ದಿನಕ್ಕೊಂದು ಸುದ್ದಿ ಬರುತ್ತಿದೆ. ಇದೀಗ ಯಶ್ ಈ ಸಿನಿಮಾದಲ್ಲಿ ಆಂಜನೇಯನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ನಾಯಕ ತೇಜ್ ಸಜ್ಜಾ ಆಂಜನೇಯನ ಭಕ್ತನಾಗಿಯೇ ಮುಂದುವರಿಯಲಿದ್ದಾರೆ ಎಂಬ ಸುದ್ದಿಯಿದೆ.

ಒಂದೆಡೆ ನಿತೀಶ್ ತಿವಾರಿ ನಿರ್ದೇಶನ ಹಿಂದಿಯ ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಇನ್ನೊಂದೆಡೆ ಹನುಮಾನ್ 2 ನಲ್ಲಿ ಹನುಮಂತನ ಪಾತ್ರ ಮಾಡುವ ಬಗ್ಗೆ ಸುದ್ದಿ ಹರಿದಾಡಲು ಆರಂಭವಾಗಿದೆ. ಅಂತೂ ಯಶ್ ಗೆ ಪರಭಾಷೆಯಲ್ಲಿ ಭಾರೀ ಬೇಡಿಕೆಯಿರುವುದಂತೂ ಸತ್ಯ.

Share this Story:

Follow Webdunia kannada

ಮುಂದಿನ ಸುದ್ದಿ

ಆದಿತ್ಯ ನಾರಾಯಣ್ ಅಭಿಮಾನಿಗೆ ಹೊಡೆದಿದ್ದೇಕೆ? ನಿಜ ಕಾರಣ ಬಯಲು