Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯಂತೆ, ರಮ್ಯಾಗೂ ಎಲ್ಲೇ ಹೋದ್ರೂ ಮಾಧ್ಯಮಗಳು ಕೇಳೋದು ಅದೊಂದೇ ಪ್ರಶ್ನೆ

Ramya

Krishnaveni K

ಬೆಂಗಳೂರು , ಬುಧವಾರ, 8 ಜನವರಿ 2025 (13:49 IST)
ಬೆಂಗಳೂರು: ನಟಿ ರಮ್ಯಾಗೂ ರಾಹುಲ್ ಗಾಂಧಿಗೂ ಜನ ಎಲ್ಲೇ ಹೋದರೂ ಮಾಧ್ಯಮಗಳು ಕೇಳೋದು ಒಂದೇ ಪ್ರಶ್ನೆ. ಇಬ್ಬರೂ ತಮ್ಮದೇ ಫೀಲ್ಡ್ ನಲ್ಲಿ ಎಲಿಜಿಬಲ್ ಬ್ಯಾಚುಲರ್ಸ್.

ರಾಹುಲ್ ಗಾಂಧಿ ಒಂದು ಕಾಲದಲ್ಲಿ ಎಲ್ಲೇ ಹೋದರೂ ರಾಜಕೀಯ ವಿಷಯವನ್ನೂ ಮರೆತು ಮಾಧ್ಯಮಗಳು ನಿಮ್ಮ ಮದುವೆ ಯಾವಾಗ ಎಂದೇ ಕೇಳುತ್ತಿದ್ದರು. ಇದಕ್ಕೆ ರಾಹುಲ್ ಕೂಡಾ ಆಗೋಣ ಎಂದು ನಕ್ಕು ಬಿಡುತ್ತಿದ್ದರು. ಕೆಲವೊಮ್ಮೆ ಚುನಾವಣಾ ರಾಲಿಗಳಲ್ಲೂ ಜನ ರಾಹುಲ್ ಗಾಂಧಿಗೆ ಇದೇ ಪ್ರಶ್ನೆ ಕೇಳುತ್ತಿದ್ದುದು ಇತ್ತು. ಆಗಲೂ ರಾಹುಲ್ ಅದಕ್ಕೆ ನಕ್ಕು ಸುಮ್ಮನಾಗುತ್ತಿದ್ದರು. ಆದರೆ ಇದುವರೆಗೆ ರಾಗಾ ತಮ್ಮ ಮದುವೆ ಸುದ್ದಿ ಕೊಟ್ಟಿಲ್ಲ.

ರಾಹುಲ್ ಗೆ ಈಗಾಗಲೇ 50 ರ ಹರೆಯ ಶುರುವಾಗಿದೆ. ಹಾಗಿದ್ದರೂ ಅವರನ್ನು ಈಗಲೂ ಅವಕಾಶ ಸಿಕ್ಕಾಗಲೆಲ್ಲಾ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನಿಸುವುದನ್ನು ಮಾತ್ರ ಬಿಟ್ಟಿಲ್ಲ. ರಾಹುಲ್ ಕೂಡಾ ತಮ್ಮ ಪ್ರೀತಿ ವಿಚಾರವನ್ನು ಬಿಟ್ಟುಕೊಟ್ಟಿಲ್ಲ.

ಬಹುಶಃ ರಾಹುಲ್ ಗಾಂಧಿಯಂತೇ ನಿಮ್ಮ ಮದುವೆ ಯಾವಾಗ ಎಂದು ಅತೀ ಹೆಚ್ಚು ಪ್ರಶ್ನೆ ಕೇಳಿಸಿಕೊಳ್ಳುವ ಮತ್ತೊಬ್ಬರೆಂದರೆ ಬಹುಶಃ ರಮ್ಯಾ ಇರಬೇಕು. ಒಂದು ಕಾಲದಲ್ಲಿ ರಮ್ಯಾ ಸ್ಯಾಂಡಲ್ ವುಡ್ ನ ಕ್ವೀನ್ ಆಗಿ ಮೆರೆದವರು. ಈಗಲೂ ಅದೇ ಪಟ್ಟ ಅವರಿಗಿದೆ. ರಾಜಕೀಯ, ಸಿನಿಮಾಗಳಿಂದ ದೂರವಿರುವ ರಮ್ಯಾ ಅಪರೂಪಕ್ಕೆ ಮಾಧ್ಯಮಗಳ ಎದುರು ಬಂದರೆ ಅವರಿಗೆ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾಗುತ್ತದೆ. ನಿನ್ನೆ ಕೂಡಾ ಕೋರ್ಟ್ ಗೆ ಹಾಜರಾಗಿದ್ದಾಗ ಅವರಿಗೆ ಅದೇ ಪ್ರಶ್ನೆ ಕೇಳಲಾಯಿತು.

ಇತ್ತೀಚೆಗೆ ರಮ್ಯಾ ತಮ್ಮ ಗೆಳೆಯನ ಜೊತೆಗೆ ವಿದೇಶದಲ್ಲಿ ಸುತ್ತಾಡುತ್ತಿರುವ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ರಮ್ಯಾಗೆ ಬಾಯ್ ಫ್ರೆಂಡ್ ಇದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಈ ಬಗ್ಗೆ ಅವರು ಎಲ್ಲೂ ತುಟಿ ಪಿಟಕ್ ಎಂದಿಲ್ಲ. ಆದರೆ ರಮ್ಯಾ ಯಾರನ್ನೋ ಡೇಟಿಂಗ್ ಮಾಡ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಹೀಗಾಗಿಯೇ ನಿನ್ನೆ ಮಾಧ್ಯಮಗಳು ಅವರನ್ನು ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದವು. ಅದಕ್ಕೆ ರಮ್ಯಾ ಏನೂ ಹೇಳದೇ ನಕ್ಕು ಸುಮ್ಮನಾದರು.

Share this Story:

Follow Webdunia kannada

ಮುಂದಿನ ಸುದ್ದಿ

Toxic Movie: ಕ್ಲಬ್ ಒಳಗೆ ಸ್ಟೈಲ್ ಆಗಿ ಎಂಟ್ರಿಕೊಟ್ಟ ಯಶ್: ಟಾಕ್ಸಿಕ್ ಗ್ಲಿಂಪ್ಸ್ ವಿಡಿಯೋ