Select Your Language

Notifications

webdunia
webdunia
webdunia
webdunia

ಪ್ರಜ್ವಲ್, ಸೂರಜ್, ದರ್ಶನ್ ಮೇಲೆ ವಾಗ್ದಾಳಿ ನಡೆಸಿದ ನಟಿ ರಮ್ಯಾ

Ramya

Krishnaveni K

ಬೆಂಗಳೂರು , ಶನಿವಾರ, 22 ಜೂನ್ 2024 (12:24 IST)
ಬೆಂಗಳೂರು:  ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಬಂಧಿತರಾಗಿರುವ ಪ್ರಜ್ವಲ್ ರೇವಣ್ಣ, ಆರೋಪಕ್ಕೊಳಗಾಗಿರುವ ಸೂರಜ್ ರೇವಣ್ಣ ಮತ್ತು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ವಿರುದ್ಧ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಕೆಂಡ ಕಾರಿದ್ದಾರೆ.

ದರ್ಶನ್ ಪ್ರಕರಣ ಹೊರಬಂದ ತಕ್ಷಣ ಮೊದಲು ಪ್ರತಿಕ್ರಿಯಿಸಿದ ಸ್ಯಾಂಡಲ್ ವುಡ್ ನಟಿ ಎಂದರೆ ರಮ್ಯಾ. ಅದೂ ದರ್ಶನ್ ವಿರುದ್ಧವಾಗಿ ನೇರವಾಗಿಯೇ ವಾಗ್ದಾಳಿ ನಡೆಸಿದ್ದರು. ಅವರಿಗೆ ಜೀವಾವಧಿ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ ಅವರ ಹಿಂದೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎಂಬುದೆಲ್ಲಾ ಸುಳ್ಳು ಎಂದಿದ್ದರು.

ಕಾನೂನು ಉಲ್ಲಂಘನೆ ಮಾಡುವವರು ಯಾವಾಗಲೂ ಶ್ರೀಮಂತರಾಗಿರುತ್ತಾರೆ. ಅವರಿಂದ ತೊಂದರೆಗೊಳಗಾಗುವವರು ಬಡವರಾಗಿರುತ್ತಾರೆ.  ಈ ಅಪರಾಧಗಳನ್ನು ಹೊರತಂದ ಪೊಲೀಸರಿಗೆ ಅಭಿನಂದನೆಗಳು. ವಿಚಾರಣೆಯನ್ನು ಬೇಗನೇ ಮುಗಿಸಿ, ಅದಕ್ಕೊಂದು ತೀರ್ಪು ಬಂದಾಗ ನಿಜವಾಗಿಯೂ ನ್ಯಾಯ ಸಿಗುತ್ತದೆ. ನ್ಯಾಯ ಸಿಗದೇ ಹೋದರೆ ಸಮಾಜಕ್ಕೆ ಏನು ಸಂದೇಶ ಕೊಟ್ಟಂತಾಗುತ್ತದೆ ಎಂದು ರಮ್ಯಾ ಪ್ರಶ್ನಿಸಿದ್ದಾರೆ.

ಈ ಹಿಂದೆಯೂ ರಮ್ಯಾ ಸೋಷಿಯಲ್ ಮೀಡಿಯಾ ಮೂಲಕ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಮತ್ತು ಇತ್ತೀಚೆಗೆ ರಾಜ್ಯದಲ್ಲಿ ಸುದ್ದಿಯಾದ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ನಾನ್ ವೆಜ್ ಕೊಟ್ಟರೂ ಪವಿತ್ರಾ ಗೌಡಗೆ ನಿದ್ರೆ ಬರ್ತಿಲ್ಲ, ಊಟ ಸೇರ್ತಿಲ್ಲ