Publish Date: Tue, 18 Jun 2024 (19:19 IST)
Updated Date: Tue, 18 Jun 2024 (19:43 IST)
ಬೆಂಗಳೂರು: ಚಿತ್ರದುರ್ಗ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಆಸ್ಪತ್ರೆ ಸೇರಿದ್ದಾರೆ. ಅವರನ್ನು ತಪಾಸಣೆ ನಡೆಸಿದ ಡಾಕ್ಟರ್ ಸವಿತಾ ಅವರು ಪವಿತ್ರಾ ಅವರಿಗೆ ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ದೃಢಪಟ್ಟಿದ್ದಾರೆ.
ಪವಿತ್ರಾ ಗೌಡ ಅವರಿಗೆ ಚಿಕಿತ್ಸೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿದಿನ ರೆಗ್ಯುಲರ್ ಚೆಕಪ್ ಮಾಡಲಾಗುತ್ತದೆ. ನಾನೇ ಠಾಣೆಗೆ ಹೋಗಿ ಎಲ್ಲರನ್ನೂ ಚೆಕಪ್ ಮಾಡುತ್ತಿದ್ದೆ. ಇವರು ಬೆಳಗ್ಗೆಯಿಂದ ತಿಂಡಿ, ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಯ್ತು ಎಂದರು.
ಠಾಣೆಗೆ ಹೋಗಿ ಅವರನ್ನು ತಪಾಸಣೆ ಹೋದಾಗ ಪವಿತ್ರಾ ಗೌಡ ಅವರಿಗೆ ಲೋ ಬಿಪಿ ಆಗಿತ್ತು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಕರೆತಂದು ಡ್ರಿಪ್ಸ್ ಹಾಕಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಚೆನ್ನಾಗಿದೆ. ಚಿಕಿತ್ಸೆಯ ಬಳಿಕ ಪವಿತ್ರಾ ಗೌಡ ಅವರನ್ನು ಪೊಲೀಸರು ವಾಪಸ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.