Select Your Language

Notifications

webdunia
webdunia
webdunia
webdunia

ಮತ್ತೆ ಸದ್ದು ಮಾಡುತ್ತಿದೆ ನಟಿ ರಮ್ಯಾ ಮದುವೆ ವಿಚಾರ

Ramya

Krishnaveni K

ಬೆಂಗಳೂರು , ಸೋಮವಾರ, 9 ಸೆಪ್ಟಂಬರ್ 2024 (10:14 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಮದುವೆಯಂತೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಸುದ್ದಿಗಳಿಗೆ ಈಗ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ನಟಿ ರಮ್ಯಾ ವಯಸ್ಸು 41 ಆಗಿದ್ದರೂ ಇನ್ನೂ ತಮ್ಮ ಮದುವೆ ಸುದ್ದಿ ಕೊಟ್ಟಿಲ್ಲ. ಇದೀಗ ರಮ್ಯಾ ಇದೇ ವರ್ಷ ತಮ್ಮ ಹುಟ್ಟುಹಬ್ಬದಂದೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ರಾಜಸ್ಥಾನ್ ಮೂಲದ ಉದ್ಯಮಿಯೊಬ್ಬರನ್ನು ರಮ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿತ್ತು.

ಚೌಧರಿ ಗಾರ್ಮೆಂಟ್ಸ್ ಮಾಲಿಕ ಪ್ರಭವ್ ಚೌಧರಿ ಜೊತೆ ರಮ್ಯಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಇದಕ್ಕೆ ಖಾಶಗಿ ವಾಹಿನಿಯೊಂದಕ್ಕೆ ರಮ್ಯಾ ಸ್ಪಷ್ಟನೆ ನೀಡಿದ್ದು, ಈ ಸುದ್ದಿಗಳೆಲ್ಲಾ ಸುಳ್ಳು ಎನ್ನುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತಣ್ಣೀರೆರಚಿದ್ದಾರೆ.

ಹಲವು ವರ್ಷದಿಂದ ಸಿನಿಮಾದಿಂದ ದೂರವಿರುವ ರಮ್ಯಾ ಕೆಲವು ಸಮಯ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದರು. ಆದರೆ ಇತ್ತೀಚೆಗೆ ತಮ್ಮ ನಿರ್ಮಾಣದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದು ಬಿಟ್ಟರೆ ಸಿನಿಮಾದಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ ಎಂಬ ಸ್ಥಿತಿಯಲ್ಲಿ ರಮ್ಯಾ ಇದ್ದಾರೆ. ಇದೀಗ ಮದುವೆ ರೂಮರ್ ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಆಂಡ್ ಗ್ಯಾಂಗ್ ಗೆ ಇಂದು ಮತ್ತೊಂದು ಅಗ್ನಿಪರೀಕ್ಷೆ