Publish Date: Sun, 08 Sep 2024 (16:54 IST)
Updated Date: Sun, 08 Sep 2024 (16:57 IST)
ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ನಟ ದರ್ಶನ್ ಮೂರು ತಿಂಗಳಾಗುತ್ತಾ ಬಂದಿದ್ದು, ಒಂದಿಲ್ಲ ಒಂದು ಸಂಕಷ್ಟಗಳು ದರ್ಶನ್ ಎದುರಾಗುತ್ತಲೇ ಬರುತ್ತಿದೆ. ಹೊರಗಡೆ ಐಷರಾಮಿ ಜೀವನ ಸಾಗಿಸುತ್ತಿದ್ದ ದರ್ಶನ್‌ಗೆ ಮೊದಲು ಜೈಲು ಊಟ ಸೇವಿಸಲು ಕಷ್ಟವಾಗಿ ಸಾಕಷ್ಟು ತೂಕ ಕಳೆದುಕೊಂಡಿದ್ದರು.
ಇನ್ನೂ ಬಳ್ಳಾರಿ ಜೈಲಿಗೆ ಬಂದ್ಮೇಲೆ ಬೆನ್ನುನೋವು ಇರುವುದರಿಂದ ಸರ್ಜಿಕಲ್ ಚೇರ್ ನೀಡುವಂತೆ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು. ಅದಲ್ಲದೆ ಜಾರ್ಜ್ ಶೀಟ್ ಸಂಬಂಧ ತಿಳಿದುಕೊಳ್ಳಲು ಟಿವಿ ನೀಡುವಂತೆ ಕೇಳಿಕೊಂಡಿದ್ದರು. ಪ್ರಕರಣ ಸಂಬಂಧ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಇನ್ನೇನು ದರ್ಶನ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ.
ದರ್ಶನ್ ಒಂದೆಡೆ ಈ ಪ್ರಕರಣದಿಂದ ಹೊರಬರಲು ಕಷ್ಟಪಡುತ್ತಿದ್ದರೆ, ಮತ್ತೊಂದೆಡೆ ತಮ್ಮ ದೇಹದ ಕಾಳಜಿ ಬಗ್ಗೆ ಚಿಂತೆ ಮಾಡುತ್ತಿದ್ದಾರೆ. ಹೊರಗಡೆ ಇದ್ದಾಗ ಫಿಟ್ ಆಗಿ ಕಾಣಿಸಿಕೊಳ್ಳಲು ದರ್ಶನ್ ಅವರು ಹೆವಿ ವರ್ಕೌಟ್ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ದೇಹಕ್ಕೆ ವರ್ಕೌಟ್ ನಡೆಸದೆ, ಸರಿಯಾದ ಪೌಷ್ಠಿಕಾಂಶವುಳ್ಳ ಆಹಾರ ಸಿಗುತ್ತಿಲ್ಲ. ಆದರೆ ದರ್ಶನ್ ತಮ್ಮ ದೇಹವನ್ನು ಸದೃಢವಾಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.
ಬಾಡಿ ಮೆಂಟೇನೆನ್ಸ್ ಮಾಡುವ ಸಲುವಾಗಿ ಅನ್ನ ಸೇವನೆ ಮಾಡುತ್ತಿಲ್ಲ. ಅದರ ಬದಲಿಗೆ ಚಪಾತಿ ಹಾಗೂ ಮುದ್ದೆ ಸೇವನೆ ಮಾಡುತ್ತಿದ್ದಾರೆ. ಇದರ ಜೊತೆಗೆ ವಿಟಮಿನ್ ಮಾತ್ರೆಗಳನ್ನು ದರ್ಶನ್ ತೆಗೆದುಕೊಳ್ಳುತ್ತಿದ್ದಾರೆ. ಬಾಡಿ ಶೇಪ್ ಹಾಳಾಗುತ್ತದೆಂದು ದರ್ಶನ್ ದೇಹದ ಕಡೆ ಗಮನಹರಿಸುತ್ತಿದ್ದಾರೆ ಎನ್ನಲಾಗಿದೆ.