Publish Date: Thu, 05 Sep 2024 (20:07 IST)
Updated Date: Thu, 05 Sep 2024 (20:10 IST)
ಬೆಂಗಳೂರು: ಆಪ್ತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಆಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ನಟ ದರ್ಶನ್ ಕೊಲೆ ಮಾಡಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇದೀಗ ತನಿಖೆ ಫೈನಲ್ ಹಂತಕ್ಕೆ ತಲುಪಿ ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
ಇದೀಗ ಪ್ರಕರಣ ಸಂಬಂಧ ಡಿಗ್ಯಾಂಗ್ ನಡೆಸಿದ ಭೀಕರ ಕೃತ್ಯ ಜತೆಗೆ ಇತರ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಜಾರ್ಜ್‌ಶೀಟ್‌ನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಜತೆಗಿರುವ ಸಂಬಂಧ ಬಗ್ಗೆ ಉಲ್ಲೇಖವಾಗಿದೆ. ಈ ಪ್ರಕರಣ ಬಯಲಿಗೆ ಬರುತ್ತಿದ್ದ ಹಾಗೇ ದರ್ಶನ್‌ಗೆ ಪವಿತ್ರಾ ಗೌಡ ಜತೆ ಮದುವೆಯಾಗಿತ್ತು ಎಂಬ ವಿಚಾರವು ಮುನ್ನೆಲೆಗೆ ಬಂದಿತ್ತು. ಆದರೆ ಇದೀಗ ಇದಕ್ಕೆಲ್ಲ ಉತ್ತರ ಸಿಕ್ಕಿದೆ.
ಈ ಹಿಂದೆ ದರ್ಶನ್ ಜತೆಗಿರುವ ಫೋಟೋವನ್ನು ಪವಿತ್ರಾ ಗೌಡ ಹಂಚಿಕೊಂಡು ನಮ್ಮಿಬ್ಬರ ಸಂಬಂಧಕ್ಕೆ 10 ವರ್ಷ ಎಂದಿದ್ದರು. ಇದೇ ವಿಚಾರಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಪವಿತ್ರಾ ಮೇಲೆ ಸಿಟ್ಟಾಗಿದ್ರು. ಇಬ್ಬರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವಾರ್ ಕೂಡ ನಡೆದಿತ್ತು. ಇದನ್ನು ನೋಡಿದವರು ಇವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಹೇಳಲಾಗಿತ್ತು.
ಚಾರ್ಜ್‌ಶೀಟ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಸುಮಾರು ವರ್ಷಗಳಿಂದ ಒಡನಾಟ ಹೊಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಕೆಲ ವರ್ಷಗಳಿಂದ ಇಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರನ್ನು ಬಂಧಿಸಿದ ವೇಳೆ ಸುದ್ದಿಗೋಷ್ಠಿ ನಡೆಸಿದ್ದ ಪೊಲೀಸರು ಪವಿತ್ರಾ ಗೌಡ ಅವರನ್ನು ದರ್ಶನ್ ಪತ್ನಿ ಎಂದು ಬಾಯ್ತಪ್ಪಿ ಹೇಳಿದ್ರು. ಇದಕ್ಕೆ ವಿಜಯಲಕ್ಷ್ಮಿ ಬೇಸರ ಹೊರಹಾಕಿ ಪೊಲೀಸರಿಗೆ ಪತ್ರ ಬರೆದಿದ್ರು. ಪವಿತ್ರಾ ಗೌಡ, ದರ್ಶನ್ ಪತ್ನಿ ಅಲ್ಲ ಪೊಲೀಸರ ವರದಿಗಳಲ್ಲಿ ಆಕೆಯನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸಬೇಡಿ ಎಂದು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ರು. ಕಾನೂನಿನ ಪ್ರಕಾರ ನಾನು ದರ್ಶನ್ ಪತ್ನಿ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ವಿವರಣೆ ನೀಡಿದ್ರು.