Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪತ್ನಿ ಆರೋಗ್ಯದಲ್ಲಿ ಏರುಪೇರು, ಮಗುವಿನ ಬೆಳವಣಿಗೆ ಬಗ್ಗೆ ವೈದ್ಯರು ಹೇಳಿದ್ದೇನು

Renukaswamy Wife Health

Sampriya

ಬೆಂಗಳೂರು , ಗುರುವಾರ, 5 ಸೆಪ್ಟಂಬರ್ 2024 (15:55 IST)
Photo Courtesy X
ಬೆಂಗಳೂರು: ಡಿ ಗ್ಯಾಂಗ್‌ ವಿರುದ್ಧದ ಜಾರ್ಜ್‌ಶೀಟ್‌ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದ್ದ ಹಾಗೇ, ರೇಣುಕಾಸ್ವಾಮಿ ಮೇಲೆ ದರ್ಶನ್, ಪವಿತ್ರಾ ಗೌಡ ಸಹಚರರು ನಡೆಸಿದ ಕ್ರೌರ್ಯ ಒಂದೊಂದೆ ಅನಾವರಣವಾಗುತ್ತಿದೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಪ್ರಾಣಭಿಕ್ಷೆಯನ್ನು ಬೇಡುತ್ತಿರುವ ಫೋಟೋಗಳು ಇದೀಗ ದರ್ಶನ್‌ ಗ್ಯಾಂಗ್‌ ಕ್ರೌರ್ಯವನ್ನು ಹೇಳುತ್ತಿದೆ. ಇದನ್ನು ನೋಡಿದವರು ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗಬೇಕೆಂದು ಹೇಳುತ್ತಿದ್ದಾರೆ.

ನಮ್ಮ ಮಗ ಪಟ್ಟ ನೋವು ನೋಡಿದಾಗ ಸಂಕಷ್ಟವಾಗುತ್ತಿದೆ ಎಂದು ಫೋಟೋ ನೋಡಿದ ರೇಣುಕಾಸ್ವಾಮಿ ಮಾವ ಕಣ್ಣೀರು ಹಾಕಿದ್ದಾರೆ.  

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಗಂಡನ ಅಗಲಿಕೆಯಿಂದ ನೊಂದಿರುವ ಮಗಳು ಕಣ್ಣೀರು ಹಾಕುತ್ತಿದ್ದಾಳೆ. ಅದಲ್ಲದೆ ಆರೋಗ್ಯದಲ್ಲೂ ಏರುಪೇರಾಗಿ ಇದೀಗ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಜ್ವರದಿಂದಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ಸಹನಾ ಅವರು ಸದ್ಯ ತಾಯಿ ಮನೆಯಲ್ಲಿದ್ದಾರೆ.

ಸಹನಾಳಿಗೆ ಜ್ವರ ಕಾಣಿಸಿಕೊಂಡು ತುಂಬಾನೇ ವೀಕ್ ಆಗಿದ್ದಾಳೆ. ಅದಲ್ಲದೆ ಮಗುವಿನ ಬೆಳವಣಿಗೆಯೂ ಸರಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

15ದಿನಗಳ ಕಾಲ ವಿಶ್ರಾಂತಿ ಪಡೆದು, ಮತ್ತೇ ಗಂಡನ ಮನೆಗೆ ಹೋಗುತ್ತಾಳೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಬಿಡುಗಡೆ ಬಗ್ಗೆ ಭವಿಷ್ಯ ನುಡಿದ ಬೀರಲಿಂಗೇಶ್ವರ ದೈವ