Select Your Language

Notifications

webdunia
webdunia
webdunia
webdunia

ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿದ ದರ್ಶನ್‌

ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿದ ದರ್ಶನ್‌

Sampriya

ಬೆಂಗಳೂರು , ಬುಧವಾರ, 4 ಸೆಪ್ಟಂಬರ್ 2024 (17:37 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆಯಾಗುತ್ತಿದ್ದ ಹಾಗೇ ಎ2 ಆರೋಪಿ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿದ್ದಾರೆ.

ಜೈಲಿನಿಂದ ಪತ್ನಿಗೆ ಕರೆ ಮಾಡಿದ ನಟ ದರ್ಶನ್ ಅವರು 5 ನಿಮಿಷಗಳ ಕಾಲ ಚಾರ್ಜ್‌ಶೀಟ್ ಸಂಬಂಧ ಮಾತುಕತೆ ನಡೆಸಿದ್ದಾರೆ. ಜೈಲಿನ ಲ್ಯಾಂಡ್‌ಲೈನ್ ಫೋನ್‌ನಿಂದ ವಿಜಯಲಕ್ಷ್ಮೀಗೆ ಕರೆ ಮಾಡಿದ್ದ ದರ್ಶನ್ ಈ ವೇಳೆ ಭಾವುಕರಾಗಿದ್ದಾರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ 89 ದಿನಗಳು ಆಗುತ್ತಿರುವಾಗ ಪೊಲೀಸರು ಸುಮಾರು ನಾಲ್ಕು ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇನ್ನು ಚಾರ್ಜ್‌ಶೀಟ್ ಹೊಂದಿದ್ದ ವಾಹನ ನ್ಯಾಯಾಲಯದತ್ತ ಸಾಗಿಸುತ್ತಿದ್ದ ಹಾಗೇ ದರ್ಶನ್ ಚಿಂತೆಗೆ ಒಳಗಾಗಿದ್ದರು.

ಈ ಸಂಬಂಧ ವಕೀಲರ ಜತೆ ಮಾತನಾಡಬೇಕೆಂದ ದರ್ಶನ್ ಅವರು ಜೈಲಾಧಿಕಾರಿಗಳ ಬಳಿ ಕರೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ವಕೀಲರ ಫೋನ್ ನಂಬರ್ ಗೊತ್ತಿಲ್ಲದ ಕಾರಣ, ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕರೆ ಮಾಡಿ ಚಾರ್ಜ್‌ಶೀಟ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಇದೀಗ ಚಾರ್ಜ್‌ಶೀಟ್ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಸೆಲ್‌ನಲ್ಲಿ ಟಿವಿ ಹಾಕಿಸಿಕೊಂಡುವಂತೆ ಜೈಲಾಧಿಕಾರಿಗಳ ಬಳಿ ಕೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ಸಮಿತಿ ರಚಿಸುವಂತೆ 153 ನಟ ನಟಿಯರ ಸಹಿ