Select Your Language

Notifications

webdunia
webdunia
webdunia
webdunia

ದರ್ಶನ್ ಜೈಲು ಸೇರಿ 3 ತಿಂಗಳು, ಇನ್ನಾದರೂ ಸಿಗುತ್ತಾ ಬಿಡುಗಡೆ ಭಾಗ್ಯ

Renukaswamy Case

Sampriya

ಬೆಂಗಳೂರು , ಭಾನುವಾರ, 8 ಸೆಪ್ಟಂಬರ್ 2024 (13:09 IST)
Photo Courtesy X
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿ ಇಂದಿಗೆ ಮೂರು ತಿಂಗಳಾಯಿತು. ಈಗಾಗಲೇ ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದು ನಾಳೆ ದರ್ಶನ್ ಸೇರಿದಂತೆ ಇತರ ಆರೋಪಿಗಳು ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.

24ನೇ ಎಸಿಎಂಎ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಪ್ಪನ ಅಗ್ರಹಾರ ಸೇರಿದಂತೆ ವಿವಿಧ ಜೈಲಿನಿಂದ ಎಲ್ಲ ಆರೋಪಿಗಳು ಹಾಜರಾಗಲಿದ್ದಾರೆ. ಆರೋಪಿಗಳ ಪರ ವಕೀಲರಿಗೆ ಜಾರ್ಜ್‌ಶೀಟ್ ಕೈಸೇರುತ್ತಿದ್ದ ಹಾಗೇ ಕೆಲವು ಆರೋಪಿಗಳಿಂದ ಜಾಮೀನಿಗೆ ಅರ್ಜಿ ಸಾಧ್ಯತೆ ಇದೆ. ಮುಖ್ಯವಾಗಿ ಎ2 ಆರೋಪಿ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಚಿತ್ರದುರ್ಗಾದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿ ಡಿ ಗ್ಯಾಂಗ್ ಕೊಲೆ ಮಾಡಿ, ಮೊರಿ ಬಳಿ ಬಿಸಾಡಿತ್ತು. ಈ ಪ್ರಕರಣವನ್ನು ಮುಚ್ಚಿ ಹಾಕಲು ಹಾಗೂ ಕೃತ್ಯದಲ್ಲಿ ದರ್ಶನ್ ಭಾಗಿಯಾಗಿರುವುದು ಚಾರ್ಜ್‌ಶೀಟ್‌ನಲ್ಲಿ ದೃಢವಾಗಿದೆ. ಇದೀಗ ದರ್ಶನ್ ಅವರು ಜೈಲು ಸೇರಿ ಮೂರು ತಿಂಗಳಾಗಿದ್ದು, ಪತಿಯನ್ನು ಈ ಪ್ರಕರಣದಿಂದ ಹೊರತರಲು ಪತ್ನಿ ವಿಜಯಲಕ್ಷ್ಮೀ ಕಾನೂನು ಹೋರಾಟದ ಜತೆ ದೇವರ ಮೊರೆ ಹೋಗುತ್ತಿದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ಅವರನ್ನು ಜಾರ್ಜ್‌ಶೀಟ್ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭೇಟಿಯಾಗಿದ್ದು, ಈ ವೇಳೆ ಅವರು ತಂದಿರುವ ಪತ್ರಗಳು ಕುತೂಹಲ ಹುಟ್ಟಿಸಿತ್ತು. ಅದು ಚಾರ್ಜ್‌ಶೀಟ್ ಸಂಬಂಧಿಸಿದ್ದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಣೆಯಲ್ಲಿ ಕುಂಕುಮ, ರೇಷ್ಮೆ ಪಂಚೆ: ಕಲ್ಟ್ ಸಿನಿಮಾ ಮುಹೂರ್ತದಲ್ಲಿ ಮಿಂಚಿದ ಝೈದ್ ಖಾನ್