Select Your Language

Notifications

webdunia
webdunia
webdunia
webdunia

ಹಣೆಯಲ್ಲಿ ಕುಂಕುಮ, ರೇಷ್ಮೆ ಪಂಚೆ: ಕಲ್ಟ್ ಸಿನಿಮಾ ಮುಹೂರ್ತದಲ್ಲಿ ಮಿಂಚಿದ ಝೈದ್ ಖಾನ್

Jaidh Khan

Sampriya

ಬೆಂಗಳೂರು , ಭಾನುವಾರ, 8 ಸೆಪ್ಟಂಬರ್ 2024 (12:54 IST)
Photo Courtesy X
ಬೆಂಗಳೂರು: ಸಚಿವ ಜಮೀರ್ ಖಾನ್ ಅವರ ಪುತ್ರ ಝೈದ್ ಖಾನ್ ಅವರು ನಾಯಕನಾಗಿ ನಟಿಸಲಿರುವ  ಹೊಸ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನೆರವೇರಿತು. ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ 'ಕಲ್ಟ್‌' ಚಿತ್ರದ ಮುಹೂರ್ತ ಮಹಾಲಕ್ಷ್ಮೀ ಲೇಜೌಟ್‌ನಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಗೌರಿಹಬ್ಬದ ಶುಭದಿನದಂದು ನೆರವೇರಿತು.

ಈ ಸಂದರ್ಭದಲ್ಲಿ ನಟ ಝೈದ್ ಖಾನ್ ಅವರು ಹಣೆಗೆ ತಿಲಕವಿಟ್ಟು ನಟಿಯರಾದ ರಚಿತಾ ರಾಮ್, ಮಲೈಕಾ ಜತೆ ಫೋಟೋಗೆ ಫೋಸ್ ಕೊಟ್ಟರು. ಇದನ್ನು ನೋಡಿದ ನೆಟ್ಟಿಗರು ಝೈದ್ ಅವರು ಹಿಂದೂ ಸಂಪ್ರದಾಯಕ್ಕೆ ನೀಡಿರುವ ಗೌರವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬನಾರಸ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಝೈದ್ ಖಾನ್ ಅವರು ಇದೀಗ ಅವರ ಎರಡನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ರಂಗಾಯಣ ರಘು, ಅಚ್ಯುತ ಕುಮಾರ್ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ.

ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಸಂಬೋಧಿಸುತ್ತಾರೆ. ಹಾಗಾಗಿ ಯವಜನತೆಗೆ ಹತ್ತಿರವಾಗಿರುವ ಕಥೆಯುಳ್ಳ ಈ ಚಿತ್ರಕ್ಕೆ ಕಲ್ಟ್ ಎಂದು ಶೀರ್ಷಿಕೆಯಿಟ್ಟಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಶಾರುಖ್‌ ಖಾನ್ ಮನೆಯಲ್ಲಿ ಅದ್ಧೂರಿ ಗಣೇಶ ಹಬ್ಬ