Select Your Language

Notifications

webdunia
webdunia
webdunia
webdunia

ದರ್ಶನ್ ಮೂರನೇ ಬೇಡಿಕೆಯನ್ನೂ ಈಡೇರಿಸಿದ ಜೈಲು ಸಿಬ್ಬಂದಿ

Darshan Thoogudeepa
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಮೂರನೇ ಬೇಡಿಕೆಯನ್ನೂ ಜೈಲು ಸಿಬ್ಬಂದಿಗಳು ಪೂರೈಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ತಪ್ಪಿಗೆ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಗೆ ದರ್ಶನ್ ಬಂದು ವಾರದ ಮೇಲಾಗಿದೆ. ಈ ವೇಳೆ ದರ್ಶನ್ ಸರ್ಜಿಕಲ್ ಚೇರ್, ಟಿವಿ ಮತ್ತು ಫೋನ್ ಮಾಡುವ ಅವಕಾಶಕ್ಕಾಗಿ ಬೇಡಿಕೆಯಿಟ್ಟಿದ್ದರು.

ಅದರಂತೆ ಅವರ ವೈದ್ಯಕೀಯ ವರದಿ ನೋಡಿಕೊಂಡು ಸರ್ಜಿಕಲ್ ಚೇರ್ ವ್ಯವಸ್ಥೆ ಮಾಡಿಕೊಡಲಾಗಿತ್ತು. ಅದಾದ ಬಳಿಕ ಜೈಲು ನಿಯಮಕ್ಕನುಗುಣವಾಗಿ ಮನೆಯವರೊಂದಿಗೆ ಫೋನ್ ನಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಾಯಿತು. ಚಾರ್ಜ್ ಶೀಟ್ ಸಲ್ಲಿಕೆ ಸಂದರ್ಭ ದರ್ಶನ್ ಮನೆಯವರೊಂದಿಗೆ ಮಾತನಾಡಿದ್ದರು.

ಬಳಿಕ ಅವರು ಟಿವಿಗೂ ಬೇಡಿಕೆಯಿಟ್ಟಿದ್ದರು. ವಿಚಾರಣಾಧೀನ ಖೈದಿಗಳಿಗೆ ಟಿವಿ ನೋಡುವ ಸೌಲಭ್ಯ ಕಲ್ಪಿಸಿಕೊಡಲು ಜೈಲು ನಿಯಮದಡಿ ಅವಕಾಶವಿದೆ. ಅದರಂತೆ ಇಂದು ಗಣೇಶ ಹಬ್ಬದ ದಿನ ದರ್ಶನ್ ಗೆ ಟಿವಿ ವ್ಯವಸ್ಥೆಯೂ ಆಗಿದೆ ಎಂದು ತಿಳಿದುಬಂದಿದೆ. ದರ್ಶನ್ ಇರುವ ಸೆಲ್ ಗೆ ಹಳೆಯ ಟಿವಿಯೊಂದನ್ನು ರಿಪೇರಿ ಮಾಡಿಸಿ ಹಾಕಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲೇ ಹೇಗಿರುತ್ತೆ ದರ್ಶನ್ ಗಣೇಶೋತ್ಸವ ಆಚರಣೆ