Select Your Language

Notifications

webdunia
webdunia
webdunia
webdunia

ಮಾಲಿವುಡ್‌ ಫೇಮಸ್‌ ನಟಿಗೆ ಮಾಡಬಾರದನ್ನು ಮಾಡಿ ಪೊಲೀಸರ ಅತಿಥಿಯಾದ ಪ್ರಖ್ಯಾತ ಉದ್ಯಮಿ

ಮಾಲಿವುಡ್‌ ಫೇಮಸ್‌ ನಟಿಗೆ ಮಾಡಬಾರದನ್ನು ಮಾಡಿ ಪೊಲೀಸರ ಅತಿಥಿಯಾದ ಪ್ರಖ್ಯಾತ ಉದ್ಯಮಿ

Sampriya

ತಿರುವನಂತಪುರ , ಬುಧವಾರ, 8 ಜನವರಿ 2025 (15:05 IST)
Photo Courtesy X
ತಿರುವನಂತಪುರ: ಮಲಯಾಳಂ ನಟಿ ಹನಿ ರೋಸ್ ಅವರಿಗೆ ಫೇಸ್‌ಬುಕ್‌ನಲ್ಲಿ ಪದೇ ಪದೇ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಪೊಲೀಸರ ಅತಿಥಿಯಾಗಿದ್ದಾರೆ.

ಆಭರಣ ಮಳಿಗೆ (ಚೆಮ್ಮನೂರ್ ಇಂಟರ್‌ನ್ಯಾಷನಲ್ ಜ್ಯುವೆಲ್ಲರ್ಸ್‌) ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿರುವ ಬಾಬಿ ಅವರನ್ನು ಬುಧವಾರ ಬೆಳಿಗ್ಗೆ ವಯನಾಡಿನ ಎಸ್ಟೇಟ್‌ನಲ್ಲಿ ಬಂಧಿಸಲಾಗಿದ್ದು, ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

ಬಾಬಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 75 ಸೇರಿದಂತೆ ವಿವಿಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಚ್ಚಿ ಸೆಂಟ್ರಲ್ ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪ್ರಕರಣ ಸಂಬಂಧ ಹನಿ ರೋಸ್ ಅವರು ಮಂಗಳವಾರ ಖುದ್ದಾಗಿ ಕೊಚ್ಚಿ ಸೆಂಟ್ರಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆಯನ್ನು ದಾಖಲಿಸಿದ್ದರು. ಘಟನೆ ಸಂಬಂಧ ಈಗಾಗಲೇ 30 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಪದೇ ಪದೇ ತನ್ನ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವುದು ಸಮಾಧಾನ ತಂದಿದೆ. ತುರ್ತಾಗಿ ಕ್ರಮ ಜರುಗಿಸಿದ ಪೊಲೀಸರಿಗೆ ಧನ್ಯವಾದಗಳು ಎಂದು ಹನಿ ರೋಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಭಾಯ್ ಬರ್ತ್‌ಡೇಗೆ ವಿಶೇಷ ರೀತಿಯಲ್ಲಿ ವಿಶ್‌ ಮಾಡಿದ ಡಿವೈನ್​ ಸ್ಟಾರ್​ ರಿಷಭ್‌​ ಶೆಟ್ಟಿ