ಬೆಂಗಳೂರು: ಟಾಕ್ಸಿಕ್ ಸಿನಿಮಾದ ಟೀಸರ್ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳು ಈಗ ಯಶ್ ಕಾಲೆಳೆಯುತ್ತಿದ್ದು, ತೊಡೆ ಮೇಲೆ ಬೇರೆ ಹುಡುಗಿಯನ್ನು ಕೂರಿಸಿದ್ರೂ ರಾಧಿಕಾ ಪಂಡಿತ್ ಸಮ್ನಿದ್ರಾ ಎಂದು ತಮಾಷೆ ಮಾಡುತ್ತಿದ್ದಾರೆ.
ಬಹುನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿತ್ತು. ಚಿತ್ರದ ಟೀಸರ್ ನಲ್ಲಿ ಯಶ್ ಕ್ಲಬ್ ಒಂದಕ್ಕೆ ಸ್ಟೈಲಿಶ್ ಆಗಿ ಎಂಟ್ರಿ ಕೊಡುತ್ತಾರೆ. ಬಳಿಕ ಅಲ್ಲಿ ಸುಂದರ ಹುಡುಗಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಶ್ಯಾಂಪೇನ್ ಸುರಿಯುವ ಹಾಟ್ ಸನ್ನಿವೇಶವಿದೆ.
ಯಶ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಇಂತಹ ಹಾಟ್ ದೃಶ್ಯಗಳಿರಲ್ಲ. ಬಹುಶಃ ತೆರೆ ಮೇಲೆ ಅವರು ಹೆಚ್ಚು ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದು ಕೇವಲ ರಾಧಿಕಾ ಪಂಡಿತ್ ಜೊತೆಗೆ ಮಾತ್ರ ಇರಬೇಕು.
ಆದರೆ ಈ ಟೀಸರ್ ನಲ್ಲಿ ಯಾವುದೋ ಹುಡುಗಿಯನ್ನು ತೊಡೆ ಮೇಲೆ ಕೂರಿಸಿಕೊಂಡು ತುಟಿಗೆ ತುಟಿ ಸನಿಹ ತರುವ ಸನ್ನಿವೇಶವಿದೆ. ಇದನ್ನು ನೋಡಿ ನೆಟ್ಟಿಗರು ಯಶ್ ಕಾಲೆಳೆದಿದ್ದಾರೆ. ಮೆಮೆಗಳ ಮೂಲಕ ರಾಧಿಕಾ ತರಾಟೆಗೆ ತೆಗೆದುಕೊಳ್ಳುತ್ತಿರುವಂತೆ ಮತ್ತು ಇದೆಲ್ಲಾ ಏನು ಮಿಸ್ಟರ್ ರಾಮಚಾರಿ ಎಂದು ರಾಧಿಕಾ ಪ್ರಶ್ನೆ ಮಾಡುತ್ತಿರುವಂತೆ ಫೋಟೋ ಹರಿಯಬಿಟ್ಟಿದ್ದಾರೆ.