ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕೆಲವೇ ದಿನ ಬಾಕಿಯಿದೆ. ಇದರ ನಡುವೆ ದೊಡ್ಮನೆಯೊಳಗೆ ಪ್ರವೇಶಿಸುವ ಸಂಭಾವ್ಯ ಸ್ಪರ್ಧಿಗಳು ಯಾರು ಎಂಬ ಬಗ್ಗೆ ಲಿಸ್ಟ್ ಒಂದು ಈಗ ವೈರಲ್ ಆಗಿದೆ.
ಬಿಗ್ ಬಾಸ್ ಆರಂಭಕ್ಕೆ ಮುನ್ನ ಈ ಬಾರಿ ಯಾರೆಲ್ಲಾ ಮನೆಯೊಳಗೆ ಹೋಗಬಹುದು ಎಂದು ಮೊದಲೇ ಗಾಸಿಪ್ ಶುರುವಾಗಿಬಿಡುತ್ತದೆ. ವೀಕ್ಷಕರಲ್ಲೂ ಕುತೂಹಲವಿರುತ್ತದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಪಟ್ಟಿಯೊಂದು ವೈರಲ್ ಆಗಿದೆ.
ಇದರಲ್ಲಿ ಘಟಾನುಘಟಿಗಳ ಹೆಸರೇ ಇದೆ. ಈ ಪಟ್ಟಿಯಲ್ಲಿರುವಂತೆ 18 ಸ್ಪರ್ಧಿಗಳ ಹೆಸರು ಓಡಾಡುತ್ತಿದೆ. ಆ ಪೈಕಿ ನಟಿ ಶ್ವೇತಾ ಪ್ರಸಾದ್, ಸ್ವಾತಿ, ವಿಜಯ್ ಸೂರ್ಯ, ಮೇಘಾ ಶೆಟ್ಟಿ, ಸಾಗರ್ ಬಿಳೀಗೌಡ, ಸಂಜನಾ ಬುರ್ಲಿ, ದಿವ್ಯಾ ವಸಂತ್, ಪಾಯಲ್ ಚೆಂಗಪ್ಪ, ಅರವಿಂದ್ ರತನ್, ವರುಣ್ ಆರಾಧ್ಯ, ಮಹಾನಟಿ ಖ್ಯಾತಿಯ ಗಗನಾ, ಡಾಕ್ಟರ್ ಬ್ರೋ, ಸ್ಯಾಮ್ ಸಮೀರ್, ಅಮೃತಾ ರಾಮಮೂರ್ತಿ, ಸಿಂಗರ್ ಸುನಿಲ್, ಬಾಳು ಬೆಳಗುಂದಿ, ಧನುಶ್ ಹೆಸರುಗಳು ಪಟ್ಟಿಯಲ್ಲಿದೆ. ಆದರೆ ಈ ಪಟ್ಟಿಯಲ್ಲಿರುವ ಎಲ್ಲಾ ಸೆಲೆಬ್ರಿಟಿಗಳೂ ಬಿಗ್ ಬಾಸ್ ಮನೆಗೆ ಬರೋದು ಡೌಟು. ಆದರೆ ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿದರೆ ಈ ಬಾರಿ ಬಿಗ್ ಬಾಸ್ ನೋಡಲು ಮಜಾ ಬರುವುದಂತೂ ಗ್ಯಾರಂಟಿ.