Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಶೋಗೆ ಮೇಘನಾ ಸರ್ಜಾ: ಮೊದಲು ನನ್ನ ಸಂಪರ್ಕಿಸಿ ಎಂದ ನಟಿ

Meghana Sarja

Krishnaveni K

ಬೆಂಗಳೂರು , ಮಂಗಳವಾರ, 9 ಸೆಪ್ಟಂಬರ್ 2025 (12:41 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋಗೆ ಈ ಬಾರಿ ನಟಿ ಮೇಘನಾ ಸರ್ಜಾ ಎಂಟ್ರಿ ಕೊಡಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಇದರ ಬಗ್ಗೆ ಸ್ವತಃ ನಟಿ ಮೇಘನಾ ಈಗ ಸ್ಪಷ್ಟನೆ ನೀಡಿದ್ದಾರೆ.

ಸೆಪ್ಟೆಂಬರ್ 28 ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಹೊಸ ಸೀಸನ್ ಶುರುವಾಗಲಿದೆ. ಪ್ರತೀ ಬಾರಿಯೂ ಬಿಗ್ ಬಾಸ್ ಶುರುವಾಗುವ ಮುಂಚೆ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಮನೆಯೊಳಗೆ ಹೋಗಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತದೆ.

ಇದರಲ್ಲಿ ಕೆಲವು ಮಾಧ್ಯಮಗಳು ಮೇಘನಾ ಹೋಗೋದು ಪಕ್ಕಾ ಎಂದು ವರದಿ ಮಾಡಿದ್ದವು. ತಮ್ಮ ಬಗ್ಗೆ ಇಂತಹ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಇನ್ ಸ್ಟಾಗ್ರಾಂನಲ್ಲಿ ಮೇಘನಾ ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದರಿಂದ ನನ್ನ ಪ್ರೇಕ್ಷಕರು ಕನ್ ಫ್ಯೂಸ್ ಆಗುತ್ತಾರೆ. ದಯವಿಟ್ಟು ಯಾವುದೇ ಮಾಧ್ಯಮಗಳು ಇಂತಹ ಸುದ್ದಿ ಬಂದರೆ ಮೊದಲು ನನ್ನ ಸಂಪರ್ಕಿಸಿ ಖಚಿತಪಡಿಸಿ. ಆಮೇಲಷ್ಟೇ ಸುದ್ದಿ ಪ್ರಕಟಿಸಿ ಎಂದು ಮೇಘನಾ ಖಡಕ್ ಆಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಯಾಧೀಶರ ಮುಂದೆ ಶಾಕಿಂಗ್ ಬೇಡಿಕೆಯಿಟ್ಟ ನಟ ದರ್ಶನ್