Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

Big Boss Kannada

Krishnaveni K

ಬೆಂಗಳೂರು , ಬುಧವಾರ, 23 ಜುಲೈ 2025 (11:00 IST)
ಬೆಂಗಳೂರು: ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೊಸ ಸೀಸನ್ ನಡೆಸಲು ಬಿಗ್ ಬಾಸ್ ಮನೆ ನಿರ್ಮಾಣ ಕೆಲಸವೂ ಶುರುವಾಗಿದೆ. ಈ ಬಾರಿ ದೊಡ್ಮನೆ ಎಲ್ಲಿರಲಿದೆ? ಇಲ್ಲಿದೆ ವಿವರ.

ಬಿಗ್ ಬಾಸ್ ಶೋಗಾಗಿ ಪ್ರೊಡಕ್ಷನ್ ಹೌಸ್ ಪ್ರತೀ ಬಾರಿ ಹೊಸ ಮನೆ ಸೆಟಪ್ ಮಾಡಿಕೊಳ್ಳುತ್ತದೆ. ಸಾಕ್ಷಾತ್ ಇಂದ್ರನ ಅರಮನೆಯಂತಹ ಸೆಟ್ ಹಾಕಿ ನೋಡುಗರ ಕಣ್ಣಿಗೆ ಹಬ್ಬದಂತೆ ಮಾಡುತ್ತದೆ. ಇದಕ್ಕಾಗಿ ಬಿಗ್ ಬಾಸ್ ತಂಡ ಸಾಕಷ್ಟು ಪರಿಶ್ರಮ ಪಡುತ್ತದೆ.

ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾಗಲಿದೆ. ಕಳೆದ ಎರಡು ಸೀಸನ್ ಗಳ ಮನೆ ತಾವರಕೆರೆ ಹಾಗೂ ದೊಡ್ಡ ಆಲದ ಮರ ಇರುವ ಪ್ರದೇಶದಲ್ಲಿ ಬೃಹತ್ ಮನೆ ಸೆಟಪ್ ಮಾಡಲಾಗಿತ್ತು. ಅದಕ್ಕಿಂತ ಮೊದಲು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಮನೆ ಸೆಟಪ್ ಇತ್ತು.

ಆದರೆ ಈಗ ಮತ್ತೆ ಇನ್ನೋವೇಟಿವ್ ಫಿಲಂ ಸಿಟಿಗೆ ಬಿಗ್ ಬಾಸ್ ಮನೆ ಶಿಫ್ಟ್ ಆಗಲಿದೆ. ಫಿಲಂ ಸಿಟಿಯಲ್ಲಿ ಈಗಾಗಲೇ ಮನೆ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ. ಈ ಬಾರಿ ಹೊಸ ವಿನ್ಯಾಸದಲ್ಲಿ ಮನೆ ಸೆಟಪ್ ಹಾಕಲಾಗುತ್ತಿದೆ ಎನ್ನಲಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ಶೋ ನಡೆಸಿಕೊಡಲಿದ್ದು ಶೋ ಯಾವಾಗ ಆರಂಭವಾಗಲಿದೆ ಎಂದು ಇನ್ನೂ ಕಲರ್ಸ್ ವಾಹಿನಿ ಅಧಿಕೃತ ಪ್ರಕಟಣೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ