ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡುವುದು ಕನ್ ಫರ್ಮ್ ಆಗಿದೆ. ಈ ಸೀಸನ್ ನಲ್ಲಿ ಅವರು ಪಡೆಯಲಿರುವ ಸಂಭಾವನೆ ಬಗ್ಗೆ ಅವರು ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಬಿಗ್ ಬಾಸ್ ಕನ್ನಡ 1 ರಿಂದ 11 ನೇ ಸೀಸನ್ ವರೆಗೂ ಸುದೀಪ್ ಅವರೇ ನಿರೂಪಣೆ ಮಾಡಿದ್ದಾರೆ. ಆದರೆ ಕಳೆದ ಸೀಸನ್ ಬಳಿಕ ಅವರು ಇನ್ನು ಬಿಗ್ ಬಾಸ್ ನಿರೂಪಣೆ ಮಾಡಿಲ್ಲ ಎಂದು ಘೋಷಿಸಿದ್ದರು. ಆದರೆ ಈಗ ಮತ್ತೆ ಅವರ ಮನವೊಲಿಸಿ ಕರೆತರಲಾಗಿದೆ. ಇನ್ನು ನಾಲ್ಕು ಸೀಸನ್ ಗೆ ಸಹಿ ಕೂಡಾ ಹಾಕಲಾಗಿದೆ ಎಂದು ಸುದೀಪ್ ಅವರೇ ಹೇಳಿದ್ದಾರೆ.
ಹಾಗಿದ್ದರೆ ಸಂಭಾವನೆ ವಿಚಾರಕ್ಕೇ ಸುದೀಪ್ ಕಳೆದ ಬಾರಿ ಇನ್ನು ಬಿಗ್ ಬಾಸ್ ಮಾಡಲ್ಲ ಎಂದರಾ? ಈಗ ಅವರಿಗೆ ಸಂಭಾವನೆ ಏರಿಕೆ ಮಾಡಲಾಗಿದೆಯೇ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿರುವ ಸುದೀಪ್ ಮನೆ ಬಾಡಿಗೆಗೆ ಹೋದರೂ 10 ಪರ್ಸೆಂಟ್ ಇನ್ ಕ್ರಿಮೆಂಟ್ ಇರುತ್ತೆ. ನಾನು ಬಾಡಿಗೆಗೂ ಅಲ್ಲ ಲೀಸ್ ಗೂ ಅಲ್ಲ. ಆದರೆ ನಮ್ಮದೂ ಒಂದು ಇರುತ್ತೆ ಅಲ್ವಾ? ಅದಕ್ಕೆ ತಕ್ಕಂತೆ ಸಂಭಾವನೆ ಪಡೆಯುತ್ತೇನೆ. ಕೇವಲ ಸಂಭಾವನೆ ವಿಚಾರಕ್ಕೆ ನಾನು ಮಾಡಲ್ಲ ಎಂದಿಲ್ಲ. ಸಂಭಾವನೆ ಹೆಚ್ಚಿಸಬೇಕೆಂದಿದ್ದರೆ ನಾನು ಟ್ವೀಟ್ ಮಾಡಬೇಕಿಲ್ಲ. ನೇರವಾಗಿ ಅವರನ್ನೇ ಕೇಳುತ್ತಿದ್ದೆ ಎಂದಿದ್ದಾರೆ.
ಆದರೆ ನಾನು ಚೀಪ್ ಅಲ್ಲ. ಮೊದಲ ಸೀಸನ್ ನ ಸಂಭಾವನೆಯನ್ನೇ ಈಗಲೂ ಪಡೆಯಕ್ಕಾಗಲ್ಲ. ಹೆಚ್ಚು ಬೇಕಾಗುತ್ತದೆ. ಪ್ರತೀ ಸೀಸನ್ ಗೂ ಒಂದು ಬಜೆಟ್ ಇರುತ್ತದೆ. ಸ್ಪರ್ಧಿಗಳಿಗೂ ಸಂಭಾವನೆ ಕೊಡಬೇಕು ಎಂದಿದ್ದಾರೆ.