Select Your Language

Notifications

webdunia
webdunia
webdunia
webdunia

ಜನ ನಾಯಗನ್ ಚಿತ್ರದ ದಳಪತಿ ಲುಕ್‌ಗೆ ಅಭಿಮಾನಿಗಳು ಫಿದಾ, 3.2ಕೋಟಿಗೂ ಅಧಿಕ ವೀಕ್ಷಣೆ

ದಳಪತಿ ವಿಜಯ್ ಫಸ್ಟ್ ಘರ್ಜನೆ

Sampriya

ಬೆಂಗಳೂರು , ಸೋಮವಾರ, 30 ಜೂನ್ 2025 (20:26 IST)
Photo Credit X
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್‌’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, 24 ಗಂಟೆಗಳಲ್ಲಿ 3.2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ಕೆ.ವಿ.ಎನ್ ಸಂಸ್ಥೆ ಬಂಡವಾಳ ಹೂಡಿದ ಈ ಚಿತ್ರವನ್ನು ವಿದೇಶದಲ್ಲೂ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.  2026ರ ಜನವರಿ 9ರಂದು ಚಿತ್ರ ತೆರೆಗೆ ಬರಲಿದೆ.

ಈ ಸಿನಿಮಾ ದಳಪತಿ ವಿಜಯ್ ನಟನೆಯ 69ನೇ ಚಿತ್ರವಾಗಿದ್ದು, ವಿಜಯ್ ಅವರ 51ನೇ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಫಸ್ಟ್‌ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಸದ್ಯ ವಿಜಯ್ ಅವರು ಸಿನಿಮಾಗಿಂತ ರಾಜಕೀಯದ ಕಡೆಗೆ ಹೆಚ್ಚು ಗಮನ ನೀಡಿದ್ದಾರೆ. ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಇವರ ಕೊನೆಯ ಚಿತ್ರವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಡೆನೂರು ಮನುಗೆ ಬಿಗ್‌ ರಿಲೀಫ್‌, ಸಿನಿಮಾ ರಂಗದಿಂದ ವಿಧಿಸಿದ್ದ ನಿಷೇಧ ತೆರವು