ಬೆಂಗಳೂರು: ಕಿಚ್ಚ ಸುದೀಪ್ ನೋಡಿದ್ರೆ ಕನ್ನಡ್ ಅಲ್ಲ ಕನ್ನಡ ಎಂದು ತಿದ್ದು ಕನ್ನಡಾಭಿಮಾನ ಮೆರೆಯುತ್ತಾರೆ. ಆದರೆ ಅವರ ಮಗಳು ಸಾನ್ವಿ ಸುದೀಪ್ ಗೆ ಮಾತ್ರ ತಪ್ಪಿಯೂ ಬಾಯಲ್ಲಿ ಒಂದೇ ಒಂದು ಕನ್ನಡ ಶಬ್ಧ ಬರಲ್ಲ. ಹೀಗಂತ ಸುದೀಪ್ ಪುತ್ರಿ ಸಾನ್ವಿ ಸಂದರ್ಶನವೊಂದು ಈಗ ಭಾರೀ ಟ್ರೋಲ್ ಗೊಳಗಾಗಿದೆ.
ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಯೂ ಟ್ಯೂಬರ್ ರಾಪಿಡ್ ರಶ್ಮಿ ಅವರ ಚಾನೆಲ್ ಗೆ ಸಂದರ್ಶನ ನೀಡಿದ್ದು, ಈ ಸಂದರ್ಶನದ ವಿಡಿಯೋ ನಿನ್ನೆ ಸುದೀಪ್ ಹುಟ್ಟುಹಬ್ಬದಂದು ಪ್ರಕಟವಾಗಿದೆ.
ಆದರೆ ಸಂದರ್ಶನದ್ದುದ್ದಕ್ಕೂ ಸಾನ್ವಿ ಒಂದೇ ಒಂದು ಕನ್ನಡ ಶಬ್ಧ ಮಾತನಾಡಿಲ್ಲ. ಸಾಮಾನ್ಯವಾಗಿ ರಾಪಿಡ್ ರಶ್ಮಿ ಕನ್ನಡದಲ್ಲೇ ಇಂಟರ್ ವ್ಯೂ ಮಾಡ್ತಾರೆ. ಆದರೆ ನಿನ್ನೆ ಮಾತ್ರ ಕಿಚ್ಚನ ಮಗಳಿಗಾಗಿ ಸಂಪೂರ್ಣ ಇಂಗ್ಲಿಷ್ ನಲ್ಲಿ ಸಂದರ್ಶನ ಮಾಡಿದ್ದರು. ಸಾನ್ವಿ ಪ್ಯಾನ್ ಇಂಡಿಯಾ ಲೆವೆಲ್ ಗೆ ಬೆಳೆಯಬೇಕು ಎಂದುಕೊಂಡಿದ್ದಾರೆ. ಅದಕ್ಕೇ ಪ್ಯಾನ್ ಇಂಡಿಯಾ ಸಂದರ್ಶನ ಮಾಡ್ತಿದ್ದೇವೆ. ಹೀಗಾಗಿಯೇ ಈ ಸಂದರ್ಶನ ಇಂಗ್ಲಿಷ್ ನಲ್ಲಿರಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆದರೆ ರಾಪಿಡ್ ರಶ್ಮಿ ಸಮಜಾಯಿಷಿ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಸಾನ್ವಿಗೆ ಕನ್ನಡ ಬರಲ್ಲ ಎಂದು ನೇರವಾಗಿ ಹೇಳಿ. ಅದು ಬಿಟ್ಟು ಇದೇನು ಪ್ಯಾನ್ ಇಂಡಿಯಾ ಎಂಬ ನೆಪ. ಸಂದರ್ಶನದಲ್ಲಿ ಒಮ್ಮೆಯಾದರೂ ತಪ್ಪಿಯಾದರೂ ಕನ್ನಡ ಮಾತಾಡಮ್ಮ ಎಂದು ಟ್ರೋಲ್ ಮಾಡಿದ್ದಾರೆ. ನಿಮ್ಮ ತಂದೆ ನೋಡಿದರೆ ಕನ್ನಡದ ಸೂಪರ್ ಸ್ಟಾರ್. ಆದರೆ ಮಗಳ ಬಾಯಲ್ಲಿ ಕನ್ನಡ ಒಮ್ಮೆಯೂ ಕೇಳಿಲ್ಲ ಎಂದಿದ್ದಾರೆ.