ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿರುವ ಬಿಗ್‌ಬಾಸ್ 12ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿ ಸ್ಪರ್ಧಾಳುಗಳಿಗೆ ಮಾತ್ರವಲ್ಲದೆ, ವೀಕ್ಷಕರಿಗೂ ಬಂಪರ್ ಬಹುಮಾನ ಗೆಲ್ಲುವ ಅವಕಾಶವಿದೆ.
ಸೆಪ್ಟೆಂಬರ್ 28ರಂದು ಭಾನುವಾರ ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 12ರ ಗ್ರಾಂಡ್ ಓಪನಿಂಗ್ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದಾಗಿದೆ. ವಾರಾಂತ್ಯದಲ್ಲಿ ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ.
ಕಳೆದ 11 ಆವೃತ್ತಿಗಳಲ್ಲಿ ಯಶಸ್ವಿಯಾಗಿ ಒಂದು ರಿಯಾಲಿಟಿ ಶೋ ನಡೆಸಿಕೊಟ್ಟ ಬೆರಳೆಣಿಕೆಯ ದಿಗ್ಗಜರಲ್ಲಿ ಒಬ್ಬರೆನಿಸಿದ ಕಿಚ್ಚ ಸುದೀಪ್ ಅವರು ಕಿಚ್ಚ, ಈ ಸಲವೂ ಬಿಗ್ ಬಾಸ್ ಚುಕ್ಕಾಣಿ ಹಿಡಿದು, ತಮ್ಮ ಐಕಾನಿಕ್ ಧ್ವನಿ, ಮೊನಚು ವ್ಯಕ್ತಿತ್ವ, ನಿಬ್ಬೆರಗಾಗಿಸೋ ವೈಖರಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ, ತಪ್ಪಿದೋರನ್ನ ತಿದ್ದೋ ಗಟ್ಟಿತನ, ಪ್ರತಿ ಬಾರಿ ಅವರು ನೀಡೋ ಸಂದೇಶ ಇವೆಲ್ಲವುದನ್ನೂ ನೋಡೋದಕ್ಕೆ ಪ್ರೇಕ್ಷಕರು ಕಾಯ್ತಿದಾರೆ.
ಈ ಬಾರಿ ಬಿಗ್‌ಬಾಸ್ ವೀಕ್ಷಕರಿಗೆ ಆಡುವ ಮಜಾ ನೀಡುವುದಕ್ಕಾಗಿ ಜೀತೋ ಧನ್ ಧನಾ ಧನ್ ಸ್ಪರ್ಧೆ ಇದೆ. ಎಪಿಸೋಡ್ ಪ್ರಸಾರವಾಗುವ ವೇಳೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ಕೇಳುವ ಸರಳ ಪ್ರಶ್ನೆಗಳಿಗೆ ಉತ್ತರಿಸಿದರೆ ಚಿನ್ನದ ನಾಣ್ಯವನ್ನು ನಿಮ್ಮದಾಗಿಸಿಕೊಳ್ಳಬಹುದು.
ಫ್ಯಾನ್ ಝೋನ್‌ನಲ್ಲಿ ಸಕ್ರಿಯರಾಗಿದ್ದರೆ ಸೀಸನ್ ಅಂತ್ಯದಲ್ಲಿ ನಡೆಯುವ ಫಿನಾಲೆಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಪಡೆಯಬಹುದು. ಈ ಬಾರಿಯೂ ನಿಮ್ಮಿಷ್ಟದ ಸ್ಪರ್ಧಿಗಳನ್ನು ಉಳಿಸುವುದಕ್ಕಾಗಿ ವೋಟ್ ಮಾಡಲು ಜಿಯೋ ಹಾಟ್‌ಸ್ಟಾರ್‌ನಲ್ಲಿ ಆಪ್‌ನಲ್ಲಿ ಮಾತ್ರ ಅವಕಾಶ ಕಲ್ಪಿಸಲಾಗಿದೆ.