Select Your Language

Notifications

webdunia
webdunia
webdunia
webdunia

ಪ್ರಾಣಸ್ನೇಹಿತೆಯ ಅರಿಶಿನ ಶಾಸ್ತ್ರದಲ್ಲಿ ಸಂಭ್ರಮಿಸಿ ಟ್ರೋಲಿಗರ ಬಾಯಿಮುಚ್ಚಿಸಿದ ಮೋಕ್ಷಿತಾ ಪೈ

Bigg Boss Mokshita Pai

Sampriya

ಬೆಂಗಳೂರು , ಭಾನುವಾರ, 9 ಫೆಬ್ರವರಿ 2025 (14:25 IST)
Photo Courtesy X
ಬೆಂಗಳೂರು: ಪಾರು ಧಾರಾವಾಹಿ ಖ್ಯಾತಿಯ ಮಾನ್ಸಿ ಜೋಶಿ  ಫೆ.16ರಂದು ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಅದಕ್ಕೆ ಪೂರ್ವಭಾವಿಯಾಗಿ ರೆಸಾರ್ಟ್‌ವೊಂದರಲ್ಲಿ ಅರಿಶಿನ ಶಾಸ್ತ್ರ ಅದ್ಧೂರಿಯಾಗಿ ಜರುಗಿದೆ. ಈ ಕಾರ್ಯಕ್ರಮದಲ್ಲಿ ಮಾನ್ಸಿಯ ಪ್ರಾಣಸ್ನೇಹಿತೆ, ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲ್ಗೊಂಡು ಸಂಭ್ರಮಿಸಿದ್ದಾರೆ.

ಮಾನ್ಸಿ ಜೋಶಿ ಅವರು ರಾಘವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಮಾನ್ಸಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ವರ ರಾಘವ್ ಹಳದಿ ಬಣ್ಣದ ಉಡುಗೆ ಧರಿಸಿದ್ದಾರೆ. ಸ್ನೇಹಿತೆ ಮಾನ್ಸಿ ಹಳದಿ ಶಾಸ್ತ್ರದಲ್ಲಿ ಮೋಕ್ಷಿತಾ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಹಳದಿ ಬಣ್ಣದ ಡ್ರೆಸ್ ಧರಿಸಿ, ಕೂದಲು ಕರ್ಲಿ ಮಾಡಿಸಿದ್ದಾರೆ. ಸ್ಟೈಲೀಶ್ ಆಗಿ ಮೋಕ್ಷಿತಾ ಕಾಣಿಸಿಕೊಂಡಿದ್ದಾರೆ.

ಇನ್ನೂ ಮೋಕ್ಷಿತಾ ಬಿಗ್ ಬಾಸ್‌ಗೆ ಹೋಗಿದ್ದ ಸಂದರ್ಭದಲ್ಲಿ ಮಾನ್ಸಿ ನಿಶ್ಚಿತಾರ್ಥ ನಡೆದಿತ್ತು. ಆಗ ಮೋಕ್ಷಿತಾ ಅನುಪಸ್ಥಿತಿಯಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದೀರಾ ಎಂದು ಸಿಕ್ಕಾಪಟ್ಟೆ ಮಾನ್ಸಿ ಅವರನ್ನು ಟ್ರೋಲ್ ಮಾಡಲಾಗಿತ್ತು. ಈಗ ಮಾನ್ಸಿ ಅರಿಶಿನ ಸಂಭ್ರಮದಲ್ಲಿ ಮೋಕ್ಷಿತಾ ಭಾಗಿಯಾಗಿ ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ.

ಫೆ.16ರಂದು ನಡೆಯಲಿರುವ ಮಾನ್ಸಿ ಮದುವೆಗೂ ಮೋಕ್ಷಿತಾಗೆ ಆಹ್ವಾನವಿದೆ. ಮೋಕ್ಷಿತಾ ಸೇರಿದಂತೆ ಕನ್ನಡದ ಕಿರುತೆರೆ ನಟ ನಟಿಯರು ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಅಭಿಮಾನಿಗಳಿಗೆ ಒಂದಾದ ಮೇಲೊಂದರಂತೆ ಗುಡ್ ನ್ಯೂಸ್