ಬೆಂಗಳೂರು: ನಿನ್ನೆ ರಕ್ಷಿತಾ ಪ್ರೇಮ್ ಸಹೋದರ ರಾಣಾ ವಿವಾಹ ಆರತಕ್ಷತೆ ಕಾರ್ಯಕ್ರಮಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಜೊತೆ ಬಂದಿದ್ದರು. ಈ ವೇಳೆ ವಿಜಯಲಕ್ಷ್ಮಿ ವಿಡಿಯೋವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಗೆಳತಿ ರಕ್ಷಿತಾ ಕರೆಗೆ ಓಗೊಟ್ಟು ದರ್ಶನ್ ಇದೇ ಮೊದಲ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಕ್ಷಿತಾ ಮತ್ತು ದರ್ಶನ್ ಉತ್ತಮ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದೇ ಸ್ನೇಹಕ್ಕೆ ಕಟ್ಟುಬಿದ್ದು ದರ್ಶನ್ ಈ ರಿಸೆಪ್ಷನ್ ಗೆ ಬಂದಿದ್ದರು.
ಆದರೆ ದರ್ಶನ್ ಬರುತ್ತಿದ್ದಂತೇ ಸಾಕಷ್ಟು ಜನ ಅಭಿಮಾನಿಗಳು ಅವರನ್ನು ಮುತ್ತಿಕೊಂಡರು. ಹೀಗಾಗಿ ಬಾಡಿಗಾರ್ಡ್ ರಕ್ಷಣೆಯಲ್ಲೇ ದರ್ಶನ್ ವೇದಿಕೆಗೆ ಬಂದಿದ್ದರು. ಇದಕ್ಕೆ ಮೊದಲು ತಮ್ಮ ಪತ್ನಿಯನ್ನು ಸುರಕ್ಷಿತವಾಗಿ ಮುಂದೆ ಕಳುಹಿಸಿದ್ದರು.
ದರ್ಶನ್ ಇತ್ತೀಚೆಗೆ ಎಲ್ಲೇ ಹೋದರೂ ಪತ್ನಿ ವಿಜಯಲಕ್ಷ್ಮಿ ಕೂಡಾ ಸಾಥ್ ನೀಡುತ್ತಿದ್ದಾರೆ. ಈ ಕಾರ್ಯಕ್ರಮಕ್ಕೂ ದರ್ಶನ್ ಪತ್ನಿ ಜೊತೆಗೇ ಬಂದಿದ್ದು ವಿಶೇಷವಾಗಿತ್ತು. ಇನ್ನು ಪತಿಗೆ ಸಿಕ್ಕ ಸ್ವಾಗತ ನೋಡಿ ವಿಜಯಲಕ್ಷ್ಮಿ ಒಳಗೊಳಗೇ ಮುಗುಳು ನಗುತ್ತಾ ಮುನ್ನಡೆಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.