ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಂನಲ್ಲಿಇಂದು ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ. ಈ ಚಿತ್ರವನ್ನು ಕಂಡು ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರಿಗೆ ಕೋರ್ಟ್ ನೀಡಿದ ಅನುಮತಿಯಿಂದಾಗಿ ಈ ಬಾರಿಯೂ ದರ್ಶನ್ ಮಕರ ಸಂಕ್ರಾತಿ ಹಬ್ಬವನ್ನು ಮೈಸೂರಿನಲ್ಲಿ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರತಿ ವರ್ಷವೂ ಸಂಕ್ರಾಂತಿಯನ್ನು ದರ್ಶನ್ ಅದ್ಧೂರಿಯಾಗಿ ಆಚರಿಸುತ್ತಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಹಸುಗಳಿಗೆ ಸಿಂಗರಿಸಿ ಕಿಚ್ಚು ಹಾಯಿಸುತ್ತಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಜೊತೆಗೆ ಸಡಗರದಿಂದಲೇ ಸಂಕ್ರಾಂತಿಯನ್ನು ಬರಮಾಡಿಕೊಳ್ಳುತ್ತಾರೆ. ಅದರಂತೆ ಈ ವರ್ಷವೂ ಕೂಡ ಹಬ್ಬ ಆಚರಿಸಲು ದರ್ಶನ್ ಮನೆಯಲ್ಲಿ ಭರ್ಜರಿ ತಯಾರಿ ನಡೆದಿದೆ.
ದರ್ಶನ್ ಅವರಿಗೆ ಬೆಂಗಳೂರು ಬಿಟ್ಟು ತೆರಳಬಾರದು ಅಂತ ಕೋರ್ಟ್ ಆದೇಶ ಇರುವುದರಿಂದ ಈ ಬಾರಿ ಸಂಕ್ರಾಂತಿ ಹಬ್ಬವನ್ನು ಎಲ್ಲಿ ಆಚರಿಸುತ್ತಾರೆ ಎಂಬ ಕುತೂಹಲ ಇತ್ತು. ಬೆಂಗಳೂರು ಕೋರ್ಟ್ ಜನವರಿ 12ರಿಂದ 17ರವೆಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿರುವುದರಿಂದ ಮೈಸೂರಿನಲ್ಲಿ ನಟ ಹಬ್ಬ ಆಚರಿಸಲಿದ್ದಾರೆ. ಈ ಬಾರಿಯೂ ಹಸು, ಕುದುರೆ, ಕುರಿ ಹಾಗೂ ಮತ್ತಿತರ ಪ್ರಾಣಿಗಳನ್ನು ಸಿಂಗರಿಸಿ ಕುಟುಂಬದೊಡನೆ ಸಂಕ್ರಾಂತಿ ಹಬ್ಬವನ್ನು ಆಚರಿಸಲಿದ್ದಾರೆ.