Select Your Language

Notifications

webdunia
webdunia
webdunia
webdunia

ಖಾಕಿ ಪಡೆಯಿಂದ ನಟ ದರ್ಶನ್‌ಗೆ ಮತ್ತೊಂದು ಶಾಕ್‌: ಹೊಸ ನೋಟಿಸ್‌ನಲ್ಲಿ ಏನಿದೆ ಗೊತ್ತಾ

actor Darshan

Sampriya

ಬೆಂಗಳೂರು , ಭಾನುವಾರ, 12 ಜನವರಿ 2025 (12:34 IST)
Photo Courtesy X
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಕೋರ್ಟ್‌ನಿಂದ ಜಾಮೀನು ಸಿಕ್ಕರೂ ಮತ್ತೊಂದು ಸಂಕಷ್ಟ ಎದುರಾಗಿದೆ.

ದರ್ಶನ್‌ಗೆ ನೀಡಿರುವ ರೆಗುಲರ್‌ ಜಾಮೀನು ರದ್ದುಗೊಳಿಸುವಂತೆ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ನಡುವೆ ದರ್ಶನ್‌ ಬಳಿಯಿರುವ ಗನ್‌ ಲೈಸೆನ್ಸ್‌ ರದ್ದು ಕುರಿತಂತೆ ಪೊಲೀಸ್‌ ನೋಟಿಸ್‌ ಜಾರಿಯಾಗಿದೆ.

ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ. ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗನ್‌ ಇರೋದ್ರಿಂದ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನ ಇದೆ. ಆದ್ದರಿಂದ ನಿಮ್ಮ ಲೈಸೆನ್ಸ್‌ ರದ್ದು ಮಾಡಬೇಕಿದೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರಿಸಬೇಕು. ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.  

ಮತ್ತೊಂದೆಡೆ ತಮ್ಮಿಂದ ಸೀಜ್ ಮಾಡಿದ್ದ 40.40 ಲಕ್ಷ ರೂ. ಹಣವನ್ನು ವಾಪಸ್ ಕೊಡಿಸುವಂತೆ ಕೋರ್ಟ್‌ಗೆ ನಟ ದರ್ಶನ್‌ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ 57ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಂಗನಾ ಎಮರ್ಜೆನ್ಸಿ ಕಂಡು ದಂಗಾದ ಗಡ್ಕರಿ: ರಿಲೀಸ್‌ಗೆ ಮುನ್ನವೇ ಚಿತ್ರ ವೀಕ್ಷಿಸಿ ಸಚಿವರು ಹೇಳಿದ್ದೇನು