Select Your Language

Notifications

webdunia
webdunia
webdunia
webdunia

ತುರ್ತಾಗಿ ಹಣ ಬೇಕಾಗಿದೆ: ಸೀಜ್‌ ಮಾಡಿರುವ ಹಣ ವಾಪಸ್‌ ನೀಡುವಂತೆ ದರ್ಶನ್‌ ಕೋರ್ಟ್‌ಗೆ ಮನವಿ

Actor Darshan Thoogudeep, Renukaswamy Case, Darshan Appeal Court For Seized Money,

Sampriya

ಬೆಂಗಳೂರು , ಶನಿವಾರ, 11 ಜನವರಿ 2025 (17:10 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸೀಜ್ ಮಾಡಿದ್ದ ₹40.40ಲಕ್ಷ ಹಣವನ್ನು ವಾಪಸ್ ಕೊಡಿಸುವಂತೆ ನಟ ದರ್ಶನ್‌ಗೆ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ 57ನೇ ಸೆಷನ್ಸ್ ಕೋರ್ಟ್‌ಗೆ ದರ್ಶನ್ ಹಾಗೂ ಪ್ರದೂಷ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ವೇಳೆ ಪೊಲೀಸರು ನಟ ದರ್ಶನ್ ನಿವಾಸ, ಪತ್ನಿ ವಿಜಯಲಕ್ಷ್ಮಿ ಹಾಗೂ ಪ್ರದೂಷ್‌ ಮನೆಯಲ್ಲಿ ಒಟ್ಟು ₹40.40 ಲಕ್ಷ ಸೀಜ್ ಮಾಡಿದ್ದರು.  

ರೇಣುಕಾಸ್ವಾಮಿ ಕೊಲೆ ಕೇಸಿನ ಸಾಕ್ಷ್ಯ ನಾಶಕ್ಕಾಗಿ ಹಣ ಸಂಗ್ರಹ ಮಾಡಿರುವ ಆರೋಪ ಹೊರಿಸಲಾಗಿತ್ತು.

ಇದೀಗ ಕೋರ್ಟ್‌ಗೆ ಮನವಿ ಮಾಡಿರುವ ನಟ ದರ್ಶನ್ ಅವರು ಸೀಜ್ ಮಾಡಿರುವ ಹಣ ತುರ್ತಾಗಿ ಭೇಕಾಗಿದೆ. ಪೊಲೀಸರು ಸೀಜ್ ಮಾಡಿರುವ ಹಣ ಬಿಡುಗಡೆಗೆ ಸೂಚಿಸುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೆ ಕೋರ್ಟ್ ಸೂಚನೆ ನೀಡಿದೆ. ಈ ಮಧ್ಯೆ, ಸೀಜ್‌ ಆದ ಹಣದ ತನಿಖೆ ಅಗತ್ಯವಿದ್ದು, ತಮ್ಮ ವಶಕ್ಕೆ ನೀಡವಂತೆ ಐಟಿ ಅರ್ಜಿ ಸಲ್ಲಿಕೆ ಮಾಡಿದೆ.

ಐಟಿ ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ದರ್ಶನ್ ಪರ ವಕೀಲರಿಗೆ ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವೇದಿತಾ ಗೌಡರಿಂದ ದೂರವಾದ ರ‍್ಯಾಪರ್‌ ಚಂದನ್‌ ಶೆಟ್ಟಿಗೆ ಮೇಲೆ ಮತ್ತೊಂದು ಆರೋಪ