ಬೆಂಗಳೂರು: ರೆಗ್ಯೂಲರ್ ಜಾಮೀನು ಸಿಕ್ಕಿದ ಬೆನ್ನಲ್ಲೇ ನಟ ದರ್ಶನ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಮಗ ವಿನೀಶ್ ಹೆಗಲು ಹಿಡಿದು ದರ್ಶನ್ ಕಷ್ಟದಲ್ಲೇ ಹೆಜ್ಜೆ ಹಾಕುತ್ತಾ ಆಸ್ಪತ್ರೆಯಿಂದ ಹೊರಬಂದು ಗಾಡಿ ಹತ್ತಿದರು.
ಇನ್ನೂ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ಗೆ ತೆರಳಿದ್ದಾರೆ. ಮಗನ ಹೆಗಲು ಹಿಡಿದು ಹೊರಬಂದ ದರ್ಶನ್ ಹೋಗಿದ್ದು, ಪತ್ನಿ ಫ್ಯಾಟ್‌ಗೆ. ಪ್ರಕರಣದಿಂದ ಬಿಗ್ ರಿಲೀಪ್ ಪಡೆದಿರುವ ನಟ ದರ್ಶನ್ ಅವರು ಇನ್ಮುಂದೆ ಮೊದಲಿನಂತಿರಲ್ಲ ಎನ್ನಲಾಗುತ್ತಿದೆ.
ಮಧ್ಯಂತರ ಜಾಮೀನು ಪಡೆದು ಪತ್ನಿ ವಿಜಯಲಕ್ಷ್ಮಿ ಹೊಸಕೆರೆಹಳ್ಳಿಯ ಫ್ಲ್ಯಾಟ್‌ಗೆ ದರ್ಶನ್ ಆಗಮಿಸಿ, ಒಂದು ದಿನ ಕಳೆದು ಆಸ್ಪತ್ರೆಗೆ ಆಡ್ಮಿಟ್ ಆಗಿದ್ದರು. ಇದೀಗ ಇಂದು ಕೂಡಾ ಪತ್ನಿ ಫ್ಲ್ಯಾಟ್‌ಗೆ ಮಗ ಮತ್ತು ಧನ್ವೀರ್ ಜೊತೆ ಮನೆಗೆ ಬಂದಿದ್ದಾರೆ. ದರ್ಶನ್ ಬರುತ್ತಿದ್ದಂತೆ ಸೆಕ್ಯೂರಿಟಿ ಸಿಬ್ಬಂದಿ ಗೇಟ್ ಅನ್ನು ಕ್ಲೋಸ್ ಮಾಡಿದ್ದಾರೆ. ದರ್ಶನ್ ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ.
ಡಿಸ್ಚಾರ್ಜ್ ಆಗಿ ಮನೆಗೆ ಬಂದಿರುವ ನೆಚ್ಚಿನ ನಟನ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಶೀಘ್ರದಲ್ಲಿ ಗುಣಮುಖರಾಗಲಿ, ಈ ಪ್ರಕರಣಕ್ಕೊಂದು ಅಂತ್ಯ ಸಿಗಲಿ ಎಂಬುದು ಅಭಿಮಾನಿಗಳ ಆಶಯ.