Select Your Language

Notifications

webdunia
webdunia
webdunia
webdunia

ನಿವೇದಿತಾ ಗೌಡರಿಂದ ದೂರವಾದ ರ‍್ಯಾಪರ್‌ ಚಂದನ್‌ ಶೆಟ್ಟಿಗೆ ಮೇಲೆ ಮತ್ತೊಂದು ಆರೋಪ

Bigg Boss Winner Chandan Shetty

Sampriya

ಬೆಂಗಳೂರು , ಶನಿವಾರ, 11 ಜನವರಿ 2025 (15:20 IST)
Photo Courtesy X
ಬೆಂಗಳೂರು: ಬಿಗ್‌ಬಾಸ್‌ ವಿನ್ನರ್‌ ಚಂದನ್ ಶೆಟ್ಟಿ ಇತ್ತೀಚೆಗಷ್ಟೆ ಕಾಟನ್ ಕ್ಯಾಂಡಿ ಎಂಬ ಹೆಸರಿನ ರ‍್ಯಾಪ್‌ ಹಾಡು ಬಿಡುಗಡೆ ಮಾಡಿದ್ದಾರೆ. ಈ ಸಾಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಇನ್​ಸ್ಟಾಗ್ರಾಂ ರೀಲ್​ಗಳಲ್ಲಿ ತಮ್ಮ ಹಾಡನ್ನು ಚಂದನ್‌ ಸಖತ್ ಪ್ರೊಮೋಷನ್ ಮಾಡುತ್ತಿದ್ದಾರೆ. ಬೇರೆ ಬೇರೆ ಸೆಲೆಬ್ರಿಟಿಗಳಿಂದ ತಮ್ಮ ಹಾಡಿಗೆ ರೀಲ್ಸ್ ಮಾಡಿಸುತ್ತಿದ್ದಾರೆ. ಆದರೆ ಇದೀಗ ಚಂದನ್ ಶೆಟ್ಟಿ ವಿರುದ್ಧ ಇದೀಗ ಕೃತಿ ಚೌರ್ಯ ಆರೋಪ ಎದುರಾಗಿದೆ.

ಚಂದನ್ ಶೆಟ್ಟಿ ತಮ್ಮ ಹಳೆಯ ಹಾಡಿನ ಟ್ಯೂನ್ ಕದ್ದು, ಕಾಟನ್ ಕ್ಯಾಂಡಿ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ತಾವು ಚಂದನ್ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಕನ್ನಡದ ರ‍್ಯಾಪರ್ ಯುವರಾಜ್‌ ಎಂಬವರು ಹೇಳಿಕೊಂಡಿದ್ದಾರೆ.

ತಾನು ಆರು ವರ್ಷದ ಹಿಂದೆ ರಚಿಸಿದ್ದ ವೈ ಬುಲ್ ಪಾರ್ಟಿ ಹಾಡಿನ ಮೊದಲ ಪಲ್ಲವಿ ಹಾಗೂ ಎರಡನೇ ಚರಣ ನಕಲು ಮಾಡಿ ಚಂದನ್‌ ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಚಂದನ್ ಶೆಟ್ಟಿಯೇ ಈ ಬಗ್ಗೆ ಮಾತನಾಡುತ್ತಾರೆ ಎಂದು ಕಾದಿದ್ದೆ. ಆದರೆ ಅವರು ಈ ಬಗ್ಗೆ ಎಲ್ಲೂ ಮಾತನಾಡಿಲ್ಲ. ನನ್ನ ಬಳಿಯೂ ಅವರು ಈ ಬಗ್ಗೆ ಕೇಳಿಲ್ಲ. ಹಾಗಾಗಿ ಈಗ ನಾನೇ ಈ ಬಗ್ಗೆ ಮಾತನಾಡುತ್ತಿದ್ದೇನೆ. ಚಂದನ್ ಶೆಟ್ಟಿ ವಿರುದ್ಧ ನಾವು ಕಾನೂನು ಮೊರೆ ಹೋಗಲಿದ್ದೇವೆ ಎಂದು ಯುವರಾಜ್ ಎಚ್ಚರಿಸಿದ್ದಾರೆ.

ಆ ಹಾಡನ್ನು ನಾನು ಬಹಳ ಕಷ್ಟಪಟ್ಟು ಮಾಡಿದ್ದೆ. ಆಗಲೇ ಹಣ ಕೂಡಿಟ್ಟು 17 ಲಕ್ಷ ರೂಪಾಯಿ ಖರ್ಚು ಮಾಡಿ ಹಾಡು ಮಾಡಿದ್ದೆ. ಕಾಟನ್ ಕ್ಯಾಂಡಿ ಹಾಡಿನಲ್ಲಿ ನನ್ನ ಟ್ಯೂನ್ ಮಾತ್ರವೇ ಅಲ್ಲದೆ ಇನ್ನೊಬ್ಬರ ಬಿಜಿಎಂ ಅನ್ನು ಸಹ ಕದ್ದಿದ್ದಾರೆ. ಚಂದನ್ ಶೆಟ್ಟಿ ಈಗಾಗಲೇ ಬೆಳೆದಿದ್ದಾರೆ. ಆದರೆ ಅವರು ಇನ್ನೊಬ್ಬರನ್ನೂ ಬೆಳೆಯಲು ಬಿಡಬೇಕು. ಚಂದನ್ ಶೆಟ್ಟಿ ನನಗೆ ಮೊದಲಿನಿಂದಲೂ ಪರಿಚಯ. ಟ್ಯೂನ್ ಬೇಕು ಎಂದು ಕೇಳಿದ್ದರೆ ನಾನೇ ಕೊಟ್ಟುಬಿಡುತ್ತಿದ್ದೆ ಎಂದಿದ್ದಾರೆ.

ಕನ್ನಡದ ಬಿಗ್‌ಬಾಸ್‌ ಮನೆಯಲ್ಲಿ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಸ್ಪರ್ಧಿಯಾಗಿದ್ದ ವೇಳೆ ಪ್ರೇಮಾಂಕುರವಾಗಿ ಬಳಿಕ ಮದುವೆಯಾಗಿದ್ದ ಅವರು ಈಚೆಗೆ ದೂರವಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕದ ಬೀಚ್‌ನಲ್ಲಿ ಶಿವಣ್ಣ ಫೋಸ್‌: ನಿಮ್ಮ ಎನರ್ಜಿಗೆ ಸಾಟಿಯಿಲ್ಲ ಎಂದ ಹ್ಯಾಟ್ರಿಕ್‌ ಹೀರೋ ಫ್ಯಾನ್ಸ್‌