Select Your Language

Notifications

webdunia
webdunia
webdunia
webdunia

ನಿವಿ- ಚಂದು ದೂರಾ ದೂರಾ, ನಾಲ್ಕು ವರ್ಷದ ದಾಂಪತ್ಯ ಬ್ರೇಕ್‌ ಹಾಕಿದ ರಾಜಾರಾಣಿ ಜೋಡಿ

ನಿವಿ- ಚಂದು ದೂರಾ ದೂರಾ, ನಾಲ್ಕು ವರ್ಷದ ದಾಂಪತ್ಯ ಬ್ರೇಕ್‌ ಹಾಕಿದ ರಾಜಾರಾಣಿ ಜೋಡಿ

sampriya

ಬೆಂಗಳೂರು , ಶುಕ್ರವಾರ, 7 ಜೂನ್ 2024 (19:30 IST)
Photo By Instagram
ಬಿಗ್‌ಬಾಸ್‌ ರಿಯಾಲಿಟಿ ಶೋ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರು ತಮ್ಮ ನಾಲ್ಕು ವರ್ಷದ ದಾಂಪತ್ಯ ಜೀವಕ್ಕೆ ಅಂತ್ಯ ಹಾಡಿದ್ದಾರೆ.

2ನೇ ಹೆಚ್ಚುವರಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಡಿವೋರ್ಸ್‌ ಬಳಿಕ ಸಾಮಾನ್ಯವಾಗಿ ವಿಚ್ಛೇದನ ಪಡೆದ ಜೋಡಿಗಳು ಒಬ್ಬರ ಮುಖ ಒಬ್ಬರು ನೋಡಲು ಇಷ್ಟಪಡುವುದಿಲ್ಲ. ಆದರೆ ಚಂದನ್‌ ಮತು ನಿವೇದಿತಾ ಅವರು ದಾಂಪತ್ಯಕ್ಕೆ ಖುಷಿಯಲ್ಲೇ ಅಂತ್ಯ ಹಾಡಿ, ಕೈ ಕೈ ಹಿಡಿದು ನ್ಯಾಯಾಲಯದಿಂದ ಹೊರಬಂದಿದ್ದಾರೆ.

 ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಕ್ಕೆ ಹಾಜರಾದ ಈ ಜೋಡಿ ಅಕ್ಕ ಪಕ್ಕ ಕುಳಿತು ವಿಚಾರಣೆ ಎದುರಿಸಿ, ಕೈ ಕೈ ಹಿಡಿದು ಕೋರ್ಟ್‌ನಿಂದ ಹೊರಬರುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇನ್ನೂ ನಿವೇದಿತಾ ಹಾಗೂ ಚಂದನ್‌ ಗೌಡ ಅವರು ಬಿಗ್‌ಬಾಸ್‌ ಶೋ ಮೂಲಕ ಪರಿಚಯವಾಗಿ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಯಾಗಿ 2019ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಚಂದನ್‌ ಪ್ರಪೋಸ್‌ ಮಾಡಿ ಸುದ್ದಿಯಾಗಿದ್ದರು. ಆ ನಂತರ ಕುಟುಂಬದ ಒಪ್ಪಿಗೆ ಮೇರೆಗೆ 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ರಾಜಾರಾಣಿ ಶೋ ನಲ್ಲೂ ಈ ಜೋಡಿ ಭಾಗವಹಿಸಿ, ಮೋಡಿ ಮಾಡಿತ್ತು.

ಇನ್ನೂ ಈ ಸ್ಟಾರ್‌ ಜೋಡಿ ದೂರವಾಗಲು ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಇಬ್ಬರೂ ಖುಷಿಯಲ್ಲೇ ತಮ್ಮ ದಾಂಪತ್ಯ ಜೀವನಕ್ಕೆ ಬ್ರೇಕ್‌ ನೀಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಡಿವೈನ್‌ ಸ್ಟಾರ್‌ ರಿಷಬ್‌ ದಂಪತಿ ಭೇಟಿ