Select Your Language

Notifications

webdunia
webdunia
webdunia
webdunia

ಹುಟ್ಟುಹಬ್ಬದ ದಿನ ಬಹುದಿನದ ಕನಸು ಈಡೇರಿಸಿದ ಮೌನ ಗುಡ್ಡೆಮನೆ

Mouna Guddemane

sampriya

ಬೆಂಗಳೂರು , ಶುಕ್ರವಾರ, 7 ಜೂನ್ 2024 (11:07 IST)
Photo By X
ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯ ಮೂಲಕ ಅಪಾರ ಪ್ರೀತಿ ಗಳಿಸುತ್ತಿರುವ ಮೌನಾ ಗುಡ್ಡೆಮನೆ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ಹೊಸ ಕಾರಿನ ಒಡತಿಯಾಗಿದ್ದಾರೆ.

13-15 ಲಕ್ಷ ಮೌಲ್ಯದ ಕಿಯಾ ಮಾಡೆಲ್ ಕಾರು ಖರೀದಿಸಿರುವ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿ ನನ್ನ ಕನಸಿಗೆ ಒಂದು ಸಣ್ಣ ಹೆಜ್ಜೆ❤️ಧನ್ಯ ಎಂದು ಬರೆದುಕೊಂಡಿದ್ದಾರೆ.

ಇನ್ನೂ ನಟಿ ಹೊಸ ಕಾರನ್ನು ಖರೀದಿಸಿದಕ್ಕೆ ಶುಭಹಾರೈಸಿದ ಅವರ ಅಭಿಮಾನಿಗಳು ಶುಭವಾಗಲಿ ಎಂದು ಹಾರೈಸಿದರು.  ಚಾರು... ನಿಮ್ ಕನಸೆಲ್ಲ ನನಸಾಗಲಿ, ನಿಮ್ ಮುಖದಲ್ಲಿ ನಗು ಯಾವಾಗ್ಲೂ ಇರ್ಲಿ ಎಂದು ಬರೆಯುತ್ತಿದ್ದಾರೆ.

ರಾಮಾಚಾರಿ ಧಾರಾವಾಹಿ ಮೂಲಕ ನಟನಾ ಲೋಕಕ್ಕೆ ಹೆಜ್ಜೆಯಿಟ್ಟು ಸದ್ಯ ಕಿರುತೆರೆಯಲ್ಲಿ ಮಿಂಚುತ್ತಿರುವ  ಮೌನ ಗುಡ್ಡೆಮನೆ ಅವರ ಕನಸು ನನಸಾಗಿಸಿ ಕೊಂಡ ಖುಷಿಯಲ್ಲಿದ್ದಾರೆ. ಈ ಮೂಲಕ ತಮ್ಮ ಬಹುದಿನದ ಕನಸನ್ನು ಹುಟ್ಟುಹಬ್ಬದ ದಿನವೇ ಈಡೇರಿಸಿಕೊಂಡಿದ್ದಾರೆ.





Share this Story:

Follow Webdunia kannada

ಮುಂದಿನ ಸುದ್ದಿ

ಪವನ್‌ ಕಲ್ಯಾಣ್‌ ಗೆಲುವಿಗೆ ಹೋಲಿಸಿದ ಪೋಸ್ಟ್‌ಗೆ ಅಸಮಾಧಾನ ಹೊರಹಾಕಿದ ಉಪೇಂದ್ರ