Select Your Language

Notifications

webdunia
webdunia
webdunia
webdunia

ಬರೋಬ್ಬರಿ 4 ಕೋಟಿಯ ಸ್ಪೋರ್ಟ್ಸ್‌ ಕಾರು ಖರೀದಿಸಿದ ಟಾಲಿವುಡ್‌ ನಟ ನಾಗಚೈತನ್ಯ

Actress Nagachaitanya

sampriya

ಹೈದರಾಬಾದ್‌ , ಬುಧವಾರ, 22 ಮೇ 2024 (14:31 IST)
Photo By Instagram
ಹೈದರಾಬಾದ್‌: ಟಾಲಿವುಡ್‌ನ ಖ್ಯಾತ ನಟ ನಾಗಚೈತನ್ಯ ಬರೋಬ್ಬರಿ ₹4 ಕೋಟಿ ಮೌಲ್ಯದ ಸ್ಫೋರ್ಟ್‌ ಕಾರನ್ನು ಖರೀದಿ ಮಾಡಿದ್ದಾರೆ. ಕಾರಿನ ಬಗ್ಗೆ ವಿಶೇಷ ಕ್ರೇಜ್ ಹೊಂದಿರುವ ಅವರ ಬಳಿ ಹಲವು ದುಬಾರಿ ಕಾರುಗಳು ಇವೆ.

ತೆಲುಗು ನಟ ನಾಗ ಚೈತನ್ಯ ಅವರು ಚೆನ್ನೈನಲ್ಲಿ ಪೋರ್ಷಾ 911 ಜಿಟಿ3 ಆರ್​ಎಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಫೋಟೋಗಳನ್ನು ಶೋರೂಂನವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಫೋರ್ಷಾ ಈ ಕಾರಿನ ಎಕ್ಸ್​ ಶೋರೂಂ ಬೆಲೆ ₹ 3.51 ಕೋಟಿ. ಆನ್​ರೋಡ್ ಬೆಲೆ ₹ 4 ಕೋಟಿ ರೂಪಾಯಿ ದಾಟಲಿದೆ. ಈ ಕಾರು ಆಟೋಮ್ಯಾಟಿಕ್, 7 ಗೇರ್, ಪ್ಯಾಡಲ್​ ಶಿಫ್ಟ್​ ಸ್ಪೋರ್ಟ್​​ ಮೋಡ್​ ಟ್ರಾನ್ಸ್​ಮೀಷನ್​ನಲ್ಲಿ ಲಭ್ಯವಿದೆ. ಈ ಕಾರು ಪ್ರತಿ ಲೀಟರ್​ಗೆ 7.4 ಕಿಮೀ ಮೈಲೇಜ್ ನೀಡಲಿದೆ.

ಈ  ಕಾರಿನ ಟಾಪ್​ ಸ್ಪೀಡ್ ಗಂಟೆಗೆ 296 ಕಿಲೋ ಮೀಟರ್‌ ಸಾಮರ್ಥ್ಯವಿದೆ. ಜೀರೋದಿಂದ 100 ಕಿಮೀ ಸ್ಪೀಡ್​ನ ಕೇವಲ 3.2 ಸೆಕೆಂಡ್​ನಲ್ಲಿ ತಲುಪಲಿದೆ. 3996 ಸಿಸಿ, 6 ಸಿಲಿಂಡರ್ ಇಂಜಿನ್ ಇದರಲ್ಲಿದ್ದು, ಪೆಟ್ರೋಲ್ ವೇರಿಯಂಟ್​ನಲ್ಲಿ ಕಾರು ಲಭ್ಯವಿದೆ.

ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ಕಾರಿನಲ್ಲಿ ಏಳು ಏರ್​ ಬ್ಯಾಗ್ ಇದೆ. ಬೆಳ್ಳಿ ಬಣ್ಣದ ಕಾರನ್ನು ನಾಗ ಚೈತನ್ಯ ಖರೀದಿ ಮಾಡಿದ್ದಾರೆ. ನಾಗಚೈತನ್ಯ ಅವರು ಶೂಟಿಂಗ್​ನಿಂದ ಬಿಡುವು ಪಡೆದಾಗಲೆಲ್ಲ ಕಾರಲ್ಲಿ ಲಾಂಗ್ ಡ್ರೈವ್ ಹೋಗುತ್ತಾರೆ.  ಇದೀಗ ಅವರ ಕಾರಿನ ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಷ್ಪ 2 ಬಗ್ಗೆ ಖುಷಿ ವಿಚಾರ ಹಂಚಿಕೊಂಡ ಶ್ರೀವಲ್ಲಿ ರಶ್ಮಿಕಾ ಮಂದಣ್ಣ