Select Your Language

Notifications

webdunia
webdunia
webdunia
webdunia

ಸೆಕೆಂಡ್‌ ಹ್ಯಾಂಡ್‌ ಬಟ್ಟೆ ಧರಿಸುವ ಮಗನ ಕೊಂಡಾಡಿದ ಅಕ್ಷಯ್‌ ಕುಮಾರ್‌

ಸೆಕೆಂಡ್‌ ಹ್ಯಾಂಡ್‌ ಬಟ್ಟೆ ಧರಿಸುವ ಮಗನ ಕೊಂಡಾಡಿದ ಅಕ್ಷಯ್‌ ಕುಮಾರ್‌

sampriya

ಮುಂಬೈ , ಮಂಗಳವಾರ, 21 ಮೇ 2024 (19:15 IST)
Photo Credit Facebook
ಮುಂಬೈ: ಜಿಯೊ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಧವನ್‌ ಕರೆಂಗೆ ಶೋನಲ್ಲಿ ಭಾಗವಹಿಸಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರು ತಮ್ಮ ಕೌಟುಂಬಿಕ ವಿಚಾರಗಳ ಬಗ್ಗೆ ಮನಬಿಚ್ಚಿ ಮಾತನಾಡಿ, ಮಗ ಆರವ್‌ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ಮಗನ ಬಗ್ಗೆ ಮಾತನಾಡಿದ ಅವರು, ಏಕಾಂಗಿಯಾಗಿ ಬದುಕಲು ಇಷ್ಟಪಡುವ ಆರವ್‌ ಲಂಡನ್‌ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ವಿದ್ಯಾಭ್ಯಾಸಕ್ಕಾಗಿ ಆತ ತನ್ನ 15ನೇ ವಯಸ್ಸಿನಲ್ಲಿಯೇ ಮನೆ ತೊರೆದಿದ್ದನು. ಏಕಾಂಗಿಯಾಗಿರಲು ಇಷ್ಟಪಡುತ್ತಿದ್ದ ಆರವ್‌ಗೆ ಓದಿನಲ್ಲಿ ಅಪಾರ ಆಸಕ್ತಿಯಿತ್ತು. ಆದರೆ ಮಗನನ್ನು ಮನೆಯಿಂದ ಹೊರ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ನಾನೂ ಕೂಡ 14ನೇ ವಯಸ್ಸಿಗೆ ಮನೆ ತೊರೆದಿದ್ದರಿಂದ ಅವನನ್ನು ತಡೆಯಲು ನನಗೆ ಸಾಧ್ಯವಾಗಿರಲಿಲ್ಲ’ ಎಂದರು.

‘ಆರವ್ ತುಂಬಾನೇ ಸರಳ ವ್ಯಕ್ತಿತ್ವವಾಗಿದ್ದು, ಆತನ ಬಟ್ಟೆಯನ್ನು ಅವನೇ ಶುಚಿಗೊಳಿಸುತ್ತಾನೆ. ಅದಲ್ಲದೆ ತನಗೆ ಬೇಕಾದ ಅಡುಗೆಗಳನ್ನು ಆತನೆ ಸಿದ್ಧಪಡಿಸಿ, ಪಾತ್ರೆಗಳನ್ನು ಆತನೇ ಕ್ಲೀನ್‌ ಮಾಡುತ್ತಾನೆ. ತನಗೆ ಬಟ್ಟೆ ಖರೀದಿಸಲು ಸೆಕೆಂಡ್ ಹ್ಯಾಂಡ್ ಸ್ಟೋರ್‌ಗಳಿಗೆ ಹೋಗುತ್ತಾನೆ. ಆತನ ಬಟ್ಟೆಗಳೆಲ್ಲವೂ ಸೆಕೆಂಡ್‌ ಹಾಂಡ್‌ ಎಂದು ಹೇಳಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಡಿಫರೆಂಟ್‌ ಆಗಿ ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಿದ ಡ್ರೋಣ್‌ ಪ್ರತಾಪ್