Select Your Language

Notifications

webdunia
webdunia
webdunia
Sunday, 6 April 2025
webdunia

ಡಿಫರೆಂಟ್‌ ಆಗಿ ಹುಟ್ಟು ಹಬ್ಬ ಆಚರಿಸಲು ನಿರ್ಧರಿಸಿದ ಡ್ರೋಣ್‌ ಪ್ರತಾಪ್

Drone Prathap

sampriya

ಬೆಂಗಳೂರು , ಮಂಗಳವಾರ, 21 ಮೇ 2024 (18:45 IST)
Photo By Instagram
ಬೆಂಗಳೂರು: ಡ್ರೋನ್‌ ಮೂಲಕ ಫೇಮಸ್‌ ಆಗಿ ಬಿಗ್ ಬಾಸ್ ಕನ್ನಡ 10’ರ ರಿಯಾಲಿಟಿ ಶೋನಲ್ಲಿ ತನ್ನ ವ್ಯಕ್ತಿತ್ವದ ಮೂಲಕ ಮೆಚ್ಚುಗೆ ಗಳಿಸಿದ ಪ್ರತಾಪ್‌ ಇದೀಗ ತಮ್ಮ ಹುಟ್ಟು ಹಬ್ಬದ ದಿನವನ್ನು ವಿಶೇಷವಾಗಿ ಆಚರಿಸಲು ಪ್ಲ್ಯಾನ್‌ ಮಾಡಿದ್ದಾರೆ.

ಜೂನ್‌ 11ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಪ್ರತಾಪ್‌ ಅವರು ಅಂದು ಬಡಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗಲು ನಿರ್ಧರಿಸಿ ಸಮಾಜಮುಖಿ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಈ ಕುರಿತಾದ ವಿಡಿಯೋವನ್ನು ಪ್ರತಾಪ್‌ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ಡಾ.ರಾಜ್‌ಕುಮಾರ್ ಸರ್ ಹೇಳ್ತಾರೆ ನೇತ್ರದಾನ ಮಹಾದಾನ ಅಂತ. ಮುಂಬರುವ ಜೂನ್ 11ಕ್ಕೆ ನನ್ನ ಹುಟ್ಟುಹಬ್ಬವಿದೆ ಸ್ನೇಹಿತರೇ ನನಗಂತೂ ಭಾರೀ ಎಕ್ಸೈಟ್‌ಮೆಂಟ್ ಇದೆ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಬೇಕೆಂದು ನಿರ್ಧರಿಸಿದ್ದು, ಯಾರಾದರೂ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆಸಕ್ತಿಯಿರುವವರು ತಿಳಿಸಿ. ಕಮೆಂಟ್‌ ಮಾಡಿ ಪ್ರತಿಕ್ರಿಯಿಸಿ ಅಭಿಪ್ರಾಯ ತಿಳಿಸಿ ಎಂದು ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಪಡುಕೋಣೆಗಿಂತ ಈ ಸ್ಟಾರ್‌ ನಟಿಗೆ ಬೇಗ ಮಗು ಆಗಲಿದೆ