Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆಗಿಂತ ಈ ಸ್ಟಾರ್‌ ನಟಿಗೆ ಬೇಗ ಮಗು ಆಗಲಿದೆ

Katrina Kaif

sampriya

ಮುಂಬೈ , ಮಂಗಳವಾರ, 21 ಮೇ 2024 (17:41 IST)
Photo By Instagram
ಮುಂಬೈ: ಸೆಪ್ಟೆಂಬರ್‌ನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಹಾಗೂ ರಣವೀರ್‌ ಸಿಂಗ್‌ ಈಚೆಗೆ ಲೋಕಸಭೆ ಚುನಾವಣೆಗೆ ಮತದಾನ ಮಾಡುವ ವೇಳೆ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ ವೈರಲ್‌ ಆಗಿದೆ.

ಇದೀಗ ಸ್ಟಾರ್‌ ಬಾಲಿವುಡ್‌ನ ಮತ್ತೊಂದು ಜೋಡಿ ಮೊದಲು ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿ ಹರಿದಾಡುತ್ತಿದೆ. ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಕೂಡ ಮೊದಲ ಮಗುವನ್ನು ಸ್ವಾಗತಿಸುತ್ತಿರುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಕತ್ರಿಕಾ ಆಗಲಿ ಅವರ ಪತಿ ವಿಕ್ಕಿ ಕೌಶಲ್‌ ಯಾವುದೇ ಸ್ಪಷ್ಟಣೆ ನೀಡಿಲ್ಲ.

ವಿಕ್ಕಿ ಕೌಶಲ್ ಜತೆಗೆ ಲಂಡನ್‌ನಲ್ಲಿ ಬೀದಿ ಸುತ್ತುತ್ತಿರುವ ಕತ್ರಿನಾ ಕೈಫ್ ಅವರ ವಿಡಿಯೋ ವೈರಲ್‌ ಆಗಿದ್ದು, ಇದೀಗ ಊಹಾಪೋಹಕ್ಕೆ ಕಾರಣವಾಗಿದೆ. ಲಂಡನ್‌ನ ಬೀದಿಯಲ್ಲಿ ವಿಕ್ಕಿ ಕೌಶಲ್‌ ಜತೆಗೆ ನಡೆದುಕೊಂಡು ಹೋಗುತ್ತಿರರುವ ವಿಡಿಯೋದಲ್ಲಿ ಕತ್ರಿಕಾ ನಡಿಗೆಯಲ್ಲಿ ಬದಲಾವಣೆ ಮತ್ತು ಆಕೆ ಧರಿಸಿರುವ ಕೋಟ್‌ನಲ್ಲಿ ಆಕೆ ಗರ್ಭಿಣಿ ಎಂದು ತೋರಿಸುತ್ತದೆ. ವಿಷಯವನ್ನು ಮುಚ್ಚಿಡುವ ಸಲುವಾಗಿ ಈ ಜೋಡಿ ಲಂಡನ್‌ಗೆ ಹೋಗಿ ಕಾಲ ಕಳೆಯುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಒಬ್ಬರು ಕಮೆಂಟ್‌ ಕತ್ರಿನಾ ಅವರು ದೀಪಿಕಾ ಪಡುಕೋಣೆಗಿಂತ ಹೆಚ್ಚು ಗರ್ಭಿಣಿಯಾಗಿ ಕಾಣುತ್ತಾಳೆ ಎಂದು ಕಮೆಂಟ್‌ ಮಾಡಿದ್ದಾರೆ.

ಮತ್ತೊಬ್ಬರು ಕಮೆಂಟ್‌ ಮಾಡಿ, ಕತ್ರಿಕಾ ನಡಿಗೆಯೇ ಹೇಳುತ್ತದೆ ಆಕೆ ಗರ್ಭಿಣಿ ಅಂತಾ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನ ಆಗಮನದ ನಂತರ ಕೂದಲಿಗೆ ನ್ಯೂ ಲುಕ್‌ ಕೊಟ್ಟ ಅನುಷ್ಕಾ ಶರ್ಮಾ