Publish Date: Wed, 17 Apr 2024 (17:14 IST)
Updated Date: Wed, 17 Apr 2024 (17:20 IST)
ಮುಂಬೈ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ದೀಪಿಕಾ ಪಡುಕೋಣೆ ಅವರು ಈಚೆಗೆ ರೋಹಿತ್ ಶೆಟ್ಟಿ ಅವರ 'ಸಿಂಗಂ ಎಗೇನ್' ಚಿತ್ರದ ಶೂಟಿಂಗ್‌ನಲ್ಲಿ ಮತ್ತೇ ಕಾಣಿಸಿಕೊಂಡಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಟಿ ದೀಪಿಕಾ ಸನ್ ಗ್ಲಾಸ್ ಧರಿಸಿ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ದೀಪಿಕಾ ಬೇಬಿ ಬಂಪ್ ಕಾಣಲಿಲ್ಲ.
ಪಾಪರಾಜಿಗಳು ಈ ಚಿತ್ರವನ್ನು ತೆಗೆದಿದ್ದು, ಸದ್ಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಿಂಗಮ್ ಫ್ರಾಂಚೈಸಿಯಲ್ಲಿ ದೀಪಿಕಾ ಅವರು ಶಕ್ತಿ ಶೆಟ್ಟಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಖಾನ್ ಸೇರಿದ ದೊಡ್ಡ ತಾರಾ ಬಳಗವಿದೆ. ಅರ್ಜುನ್ ಕಪೂರ್ ಈ ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ, ದೀಪಿಕಾ ಮತ್ತು ರೋಹಿತ್ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಪಾತ್ರದ ಶಕ್ತಿಯ ಫಸ್ಟ್ ಲುಕ್‌ನ್ನು ಬಿಡುಗಡೆ ಮಾಡಿದರು.
"ನಾರಿ ಸೀತಾ ಕಾ ಭಿ ರೂಪ್ ಹೈ ಔರ್ ದುರ್ಗಾ ಕಾ ಭಿ... ನಮ್ಮ ಕಾಪ್ ಯೂನಿವರ್ಸಿನ ಅತ್ಯಂತ ಕ್ರೂರ ಮತ್ತು ಹಿಂಸಾತ್ಮಕ ಅಧಿಕಾರಿಯನ್ನು ಭೇಟಿ ಮಾಡಿ... ಶಕ್ತಿ ಶೆಟ್ಟಿ... ಮೈ ಲೇಡಿ ಸಿಂಗ್... ದೀಪಿಕಾ ಪಡುಕೋಣೆ ಎಂದು ರೋಹಿತ್ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಇಟಲಿಯ ಲೇಕ್ ಕೊಮೊದಲ್ಲಿ 2018 ರಲ್ಲಿ ಮದುವೆಯಾದ ದೀಪಿಕಾ ಮತ್ತು ರಣವೀರ್ ಫೆಬ್ರವರಿಯಲ್ಲಿ ಮೊದಲ ಮಗುವಿನ ಆಗಮನದ ಬಗ್ಗೆ ಘೋಷಿಸಿದ್ದರು. ದಂಪತಿಗಳು ಇತ್ತೀಚೆಗೆ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಉತ್ಸವಗಳಲ್ಲಿ ಭಾಗವಹಿಸಿದ್ದರು