Select Your Language

Notifications

webdunia
webdunia
webdunia
webdunia

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Dwarakeesh

Krishnaveni K

ಬೆಂಗಳೂರು , ಬುಧವಾರ, 17 ಏಪ್ರಿಲ್ 2024 (10:37 IST)
ಬೆಂಗಳೂರು: ಕನ್ನಡ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿನ್ನೆ ಹಿರಿಯ ನಟ ದ್ವಾರಕೀಶ್ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ ನೀಡಿದ ಹಿರಿಯ ನಟನ ಸಾವಿಗೆ ಅನೇಕ ಚಿತ್ರತಾರೆಯರು, ರಾಜಕೀಯ ನಾಯಕರು, ಅಭಿಮಾನಿ ಗಳು ಸಂತಾಪ ಸೂಚಿಸಿದ್ದರು. ಇಂದು ದ್ವಾರಕೀಶ್ ಅಂತಿಮ ಕ್ರಿಯೆ ಬೆಂಗಳೂರಿನಲ್ಲಿ ನಡೆಯಲಿದೆ.

ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ ಮಾಡಿರುವ ಮೋದಿ ಚಲನಚಿತ್ರೋದ್ಯಮಕ್ಕೆ ದ್ವಾರಕೀಶ್ ಜಿ ಅವರ ಕೊಡುಗೆ ಅಪಾರವಾಗಿದೆ, ದಶಕಗಳ ಕಾಲ ಮರೆಯಲಾಗದ ಪ್ರದರ್ಶನಗಳು ಮತ್ತು ನೆಲಮಾಳಿಗೆಯ ಚಲನಚಿತ್ರಗಳನ್ನು ವ್ಯಾಪಿಸಿದೆ. ಪ್ರೇಕ್ಷಕರನ್ನು ಆಕರ್ಷಿಸುವ ಮತ್ತು ಯುವ ಪ್ರತಿಭೆಗಳನ್ನು ಬೆಂಬಲಿಸುವ ಅವರ ಸಾಮರ್ಥ್ಯವು ಕನ್ನಡ ಚಿತ್ರರಂಗವನ್ನು ರೂಪಿಸುವಲ್ಲಿ ಅವರ ಬಹುಮುಖಿ ಪಾತ್ರದ ಒಂದು ನೋಟವನ್ನು ನೀಡಿತು. ಅವರ ನಿಧನದಿಂದ ದುಃಖವಾಗಿದೆ. ಅವರ ಅಪೂರ್ವ ಪ್ರಯಾಣವನ್ನು ನಾವು ಸದಾ ಸ್ಮರಿಸುತ್ತೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.ಎಂದಿದ್ದಾರೆ.

ಇಂದು ದ್ವಾರಕೀಶ್ ಅಂತಿಮ ಕ್ರಿಯೆಗಳು ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ. ಇದಕ್ಕೆ ಮೊದಲು ಇದೀಗ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಈಗಾಗಲೇ ನಟಿ ತಾರಾ, ಅನಿರುದ್ಧ್ ಜತ್ಕಾರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕ ತಾರೆಯರು, ಸಾರ್ವಜನಿಕರು ಬಂದು ಅಂತಿಮ ದರ್ಶನ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ದ್ವಾರಕೀಶ್ ಗೆ ಇಂದು ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ