Publish Date: Wed, 17 Apr 2024 (15:48 IST)
Updated Date: Wed, 17 Apr 2024 (15:55 IST)
ಮುಂಬೈ: ರಾಮನವಮಿಯ ಶುಭ ಸಂದರ್ಭದಲ್ಲಿ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಅವರು ರಾಮಲಲ್ಲಾನ ಪ್ರತಿಷ್ಠೆಯ ಭೇಟಿಯ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮಲಲ್ಲಾನ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ನಟಿ ಕಂಗನಾ ಅವರು ಭಾಗವಹಿಸಿದ್ದರು. ಈ ವೇಳೆ ಚಿತ್ರೀಕರಿಸಿದ ವೀಡಿಯೊ ಕ್ಲಿಪ್ ಅನ್ನು ಹಂಚಿ, ರಾಮನವಮಿಯ ಶುಭಾಶಯ ತಿಳಿಸಿದರು.
ಅವರು ಹಂಚಿಕೊಂಡ ವೀಡಿಯೊ ಕ್ಲಿಪ್ ದೇವಾಲಯದ ವೈಭವವನ್ನು ಪ್ರದರ್ಶಿಸಿತು ಮಾತ್ರವಲ್ಲದೆ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಉನ್ನತ ಗಣ್ಯರು ಸೇರಿದಂತೆ ಕಿಕ್ಕಿರಿದ ಪ್ರೇಕ್ಷಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರ ರೋಮಾಂಚನಕಾರಿ ಭಾಷಣದ ತುಣುಕುಗಳನ್ನು ಸಹ ಒಳಗೊಂಡಿತ್ತು.
"500 ವರ್ಷಗಳ ನಂತರ, ರಾಮ್ ಲಲ್ಲಾ ತನ್ನ ಭವ್ಯವಾದ ದೇವಾಲಯದಲ್ಲಿ ರಾಮನವಮಿಯನ್ನು ಮೊದಲ ಬಾರಿಗೆ ಆಚರಿಸುತ್ತಿರುವ ಶುಭ ಕ್ಷಣ ಬಂದಿದೆ" ಎಂದು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಿದ್ದಾರೆ.