Select Your Language

Notifications

webdunia
webdunia
webdunia
webdunia

ದೇಶದ ಮೂಲೆಮೂಲೆಗಳಿಂದ ರಾಮಲಲ್ಲಾನ ಜನ್ಮಸ್ಥಳಕ್ಕೆ ಬಂದು ತಲುಪುತ್ತಿವೆ ಉಡುಗೊರೆಗಳು

 ರಾಮಮಂದಿರ

geetha

ಅಯೋಧ್ಯೆ , ಬುಧವಾರ, 17 ಜನವರಿ 2024 (20:01 IST)
ಅಯೋಧ್ಯೆ :ಹೈದರಾಬಾದ್‌ ಮೂಲದ ನಾಗಭೂಷಣ್‌ ರೆಡ್ಡಿ ಎಂಬುವವರು ಶ್ರೀರಾಮನ ನೈವೇದ್ಯಕ್ಕೆಂದು 1265 ಕೆಜಿ ತೂಕದ ಬೃಹತ್‌ ಲಡ್ಡು ತಯಾರಿಸಿದ್ದಾರೆ. ಜೈ ಶ್ರೀರಾಮ್‌ ಎಂದು ಲಡ್ಡು ಮೇಲೆ ಬರೆಯಲಾಗಿದ್ದು, ಬುಧವಾರ ಈ ಬೃಹತ್‌ ಲಡ್ಡುವನ್ನು ಹೈದರಾಬಾದ್‌ ನಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುತ್ತಿದೆ. 
 
ಇದೇ ವೇಳೆ 12 ಲಕ್ಷ ನೇಕಾರರು ಸಿದ್ದಪಡಿಸಿರುವ ಕೈಮಗ್ಗದ ಉಡುಪುಗಳನ್ನು ಸಿಎಂ ಯೋಗಿ ಆದಿತ್ಯನಾಥ್‌ ರಾಮಮಂದಿರಕ್ಕೆ ಸಮರ್ಪಿಸಿದ್ದಾರೆ. ನೇಕಾರರ ಸಮುದಾಯದಿಂದ ರಾಮಲಲ್ಲಾನಿಗೆ ಉಡುಗೊರೆ ನೀಡುವ ವಿಶಿಷ್ಟ ಅಭಿಯಾನ ಕೈಗೊಳ್ಳಲಾಗಿತ್ತು.

 ರಾಮಮಂದಿರದಲ್ಲಿ ರಾಮನ ಪ್ರತಿಷ್ಠಾಪನಾ ಕಾರ್ಯಕ್ಕೆ ಕೇವಲ ಐದು ದಿನಗಳಷ್ಟೇ ಬಾಕಿ ಉಳಿದಿವೆ. ಈ ವೇಳೆ ದೇಶದ ಮೂಲೆಮೂಲೆಗಳಿಂದ ಉಡುಗೊರೆಗಳು ರಾಮಲಲ್ಲಾನ ಜನ್ಮಸ್ಥಳಕ್ಕೆ ಬಂದು ತಲುಪುತ್ತಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗಂಗಾಮತ,ಕೇಂದ್ರಕ್ಕೆ ಶೀಘ್ರವೇ ಸ್ಪಷ್ಟೀಕರಣ-ಸಿಎಂ ಸಿದ್ದರಾಮಯ್ಯ